ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಪೂಜ್ಯ ಲಿಂ.ಡಾ.ಶರಣಬಸವಪ್ಪ ಅಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಎವಲೆ ಮಾತನಾಡಿದರು. ಡಾ.ಶಿವಕುಮಾರ ಪಾಟೀಲ, ರಾಚಯ್ಯ ಸ್ವಾಮಿ, ಎಂ.ಜಿ.ಪಾಟೀಲ್, ಸಿದ್ರಾಮಪ್ಪ ಮಾಲಿಪಾಟೀಲ್, ಲೋಕೇಶ ಮೈನಾಳೆ, ಡಾ.ವಿದ್ಯಾಧರ ಧುತ್ತರಗಾಂವ್ ಇದ್ದರು. 
ಜಿಲ್ಲೆ

ಶೈಕ್ಷಣಿಕ ಕ್ಷೇತ್ರಕ್ಕೆ ಪೂಜ್ಯ ಅಪ್ಪ ಕೊಡುಗೆ ಅನನ್ಯ

ಬಸವಕಲ್ಯಾಣ: ಕಲ್ಯಾಣ ಕರ್ನಾಟಕದ ಶಿಕ್ಷಣ ಕ್ರಾಂತಿಯ ಹರಿಕಾರರಾದ ವಿದ್ಯಾ ಭಂಡಾರಿ ಪೂಜ್ಯ ಲಿಂ. ಡಾ. ಶರಣಬಸವಪ್ಪ ಅಪ್ಪ ಅವರು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ಡಾ.ಬಸವರಾಜ ಎವಲೆ ಹೇಳಿದರು.

ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕದ ಅಕ್ಷರ ಕ್ರಾಂತಿಯ ಹರಿಕಾರ ಪರಮ ಪೂಜ್ಯ ಲಿಂ. ಡಾ. ಶರಣಬಸವಪ್ಪ ಅಪ್ಪ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನದಾಸೋಹ ಮಹಾದಾಸೋಹವಾದರೆ - ಅಕ್ಷರ ದಾಸೋಹ ಮಹೋನ್ನತ ದಾಸೋಹವಾಗಿದೆ ಎಂದು ಸಾರಿದ ಪುಜ್ಯರು ಕಲ್ಯಾಣ ಕರ್ನಾಟಕದ ಸರ್ವೋತೊಮುಖ ಏಳಿಗೆಯಲ್ಲಿ ಮತ್ವದ ಪಾತ್ರ ವಹಿಸಿದ್ದಾರೆ. ಸ್ತ್ರೀ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ ಶ್ರೇಷ್ಠ ಶಿಕ್ಷಣ ಸಂತ ಎನಿಸಿಕೊಂಡವರು. ಗುಲ್ಬರ್ಗ ವಿಶ್ವವಿದ್ಯಾಲಯ ಸ್ಥಾಪಿಸಲು ಇವರ ಪಾತ್ರ ತುಂಬಾ ಮಹತ್ವದ್ದಾಗಿದೆ. ಶರಣ ಬಸವ ವಿಶ್ವವಿದ್ಯಾಲಯ ಸ್ಥಾಪಿಸಿದರು. ಬಸವಕಲ್ಯಾಣದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಹತ್ತು ಎಕರೆ ಜಾಗವನ್ನು ಸರ್ಕಾರಕ್ಕೆ ದಾನ ನೀಡಿದ ಸಮಾಜಮುಖಿಯ ಕಾರ್ಯ ಎಂದಿಗೂ ಅಜರಾಮರವಾಗಿರುತ್ತದೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ ಮಾತನಾಡಿ, ಪೂಜ್ಯ ಲಿಂ.ಡಾ.ಶರಣಬಸವಪ್ಪ ಅಪ್ಪ ಅವರ ಶೈಕ್ಷಣಿಕ ಪ್ರಗತಿ ಹಾಗೂ ಕಲ್ಯಾಣ ಕರ್ನಾಟಕದ ಉನ್ನತಿಗೆ ನೀಡಿದ ಕೊಡುಗೆ ಅಪಾರ. ಈ ಭಾಗದಲ್ಲಿ ನಾಲ್ಕು ವಿಶ್ವವಿದ್ಯಾಲಯಗಳು ಬರಲು ಅಪ್ಪಾಜಿಯವರು ಹಾಕಿದ ಶೈಕ್ಷಣಿಕ ಅಡಿಪಾಯವೇ ಕಾರಣವಾಗಿದೆ ಎಂದರು.

ಹಿರಿಯ ಉಪನ್ಯಾಸಕರಾದ ಡಾ. ಎಂ.ಜಿ.ಪಾಟೀಲ, ಕಲ್ಯಾಣಪ್ಪ ನಾವದಗಿ, ಐಕ್ಯೂಎಸಿ ಸಂಯೋಜಕ ಡಾ.ರಮೇಶ ಕೆ.ಬಿ., ಮಹಾದೇವ.ಡಿ. ದೊಡ್ಡಪ್ಪ ಅಪ್ಪ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ರಾಚಯ್ಯ ಮಠಪತಿ, ಮತ್ತು ಶರಣಬಸವೇಶ್ವರ ರೆಸಿಡೆನ್ಸಿಯಲ್ ಪಬ್ಲಿಕ್ ಸ್ಕೂಲ್ ಮುಖ್ಯಗುರು ವಿದ್ಯಾಧರ ಧುತ್ತರಗಾಂವ್ ಮಾತನಾಡಿದರು.

ಡಾ.ಸುರೇಶ ಎಚ್.ಆರ್, ಡಾ.ವಿಜಯಕುಮಾರ, ಡಾ. ಮಲ್ಲಿಕಾರ್ಜುನ, ಸಿದ್ರಾಮಪ್ಪ ಮಾಲಿ ಪಾಟೀಲ, ಲೋಕೇಶ ಮುನ್ನಾಳೆ, ಸತೀಶ ರಾಠೋಡ್, ಭಾರತಿ ಮಠ, ವೈಶಾಲಿ, ಸಂಗೀತ ಮಠಪತಿ, ಸುಮನ ರೆಡ್ಡಿ, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿ ಬರುವ ಎಲ್ಲ ಕಾಲೇಜುಗಳ ಬೋಧಕ ಬೋಧಕರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭೀಮಾಶಂಕರ ಪೂಜಾರಿ ಅವರು ಸ್ವಾಗತಿಸಿ, ನಿರೂಪಣೆ ಮಾಡಿದರು. ಗ್ರಂಥಪಾಲಕ ಸೂರ್ಯಕಾಂತ ನಾಸೆ ಭಕ್ತಿ ಗೀತೆ ಹಾಡಿದರು.