ಬಳ್ಳಾರಿ : ಜಿಲ್ಲಾ ಪದಾಧಿಕಾರಿಗಳು ಸಮಾಜದ ಶೈಕ್ಷಣಿಕ ಏಳಿಗೆಗೆ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಜಲೀಲ್ ಸಾಬ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದಿಂದ ಬುಧವಾರ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬರು ಸಂಘಟನೆಯನ್ನು ಸಂಘಟಿಸುವದರ ಮೂಲಕ ಜಾಗೃತರಾಗಬೇಕು. ನಮ್ಮ ಸಮಾಜದಲ್ಲಿ ಹಿಂದುಳಿದವರನ್ನು ಗುರುತಿಸಿ ಅವರ ಶೈಕ್ಷಣಿಕವಾಗಿ ಸಹಕಾರ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಶಾಲಾ ದಾಖಲೆಗಳಲ್ಲಿ ಹಿಂದೂ ಪಿಂಜಾರ, ಮುಸ್ಲಿಂ ಪಿಂಜಾರ ಎಂದು ಸೇರಿಸಲಾಗುತ್ತಿದೆ. ಅದನ್ನು ಬಿಟ್ಟು ಪಿಂಜಾರ ಸಮುದಾಯ ಮಾತ್ರ ನಮೂದಿಸುವದರ ಬಗ್ಗೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು. ಮಹಿಳೆಯರ ಸ್ವಾವಲಂಬಿಯಾಗಿ ಜೀವಿಸಲು ಅಗತ್ಯ ನೆರವು ನೀಡಬೇಕು. ಆದ್ದರಿಂದ, ಮುಂದಿನ ದಿನಗಳಲ್ಲಿ ಮಹಿಳಾ ಸಮಾವೇಶ ಆಯೋಜಿಸಲು ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಿ.ಡಿ. ನದಾಫ್, ಕಾರ್ಯದರ್ಶಿಗಳಾದ ಫರ್ಜನ್, ಶೆಬುದ್ದಿನ್, ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಹೆಚ್.ಇ. ದಾದಾ ಕಲಾಂದರ್, ಖಜಾಂಚಿ ಚಾಂದ್ ಸಾಬ್ ಹಾಗೂ ಇತರರಿದ್ದರು.