filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45; 
ಜಿಲ್ಲೆ

ಶೇಡಬಾಳ ಅಭಿವೃದ್ಧಿಗೆ ಶ್ರಮಿಸಿ

ಕಾಗವಾಡ: ಪಟ್ಟಣ ಪಂಚಾಯಿತಿ ಸದಸ್ಯರು ಪಕ್ಷಬೇಧ ಮರೆತು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದು ಶಾಸಕ ರಾಜು ಕಾಗೆ ತಿಳಿಸಿದರು.

ಶುಕ್ರವಾರ ತಾಲೂಕಿನ ಶೇಡಬಾಳ ಪಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಎಲ್ಲ ಸಾರ್ವಜನಿಕರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಮೂಲ ಸೌಕರ್ಯ ನೀಡುವುದು ಆದ್ಯ ಕರ್ತವ್ಯ. ಎಲ್ಲ ಸದಸ್ಯರು ಪಕ್ಷ ಬೇಧ ಮರೆತು, ಸಾರ್ವಜನಿಕರ ಸೇವೆ ಮಾಡಿ ಎಂದು ಕರೆ ನೀಡಿದರು.

ಸಭೆಯಲ್ಲಿ ಸುಧಿರ ಮಾಳಪ್ಪಗೋಳ ವರದಿ ವಾಚನ ಮಾಡಿದರು. ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ, ಉಪಾಧ್ಯಕ್ಷೆ ದೀಪಾ ಹೊನಕಾಂಬಳೆ, ಮುಖ್ಯಾಧಿಕಾರಿ ಸುರೇಶ ಪತ್ತಾರ, ಸದಸ್ಯರಾದ ಮಹಾಧವಲ ಯಾದವಾಡ, ರಾಜು ಚೌಗುಲೆ, ಅನ್ನಪ್ಪ ಮಾಕನ್ನವರ, ಬಾಬು ಐನಾಪೂರೆ, ರಮೇಶ ರತ್ನಪ್ಪಗೋಳ, ಅನಿಲ ಮಾಲಗಾಂವೆ, ರಾಮು ನರಸಾಯಿ, ರಶೀದಾ ಮೇಸ್ತ್ರೀ, ಸ್ವಾತಿ ಜಗತಾಪ, ಸುಲಭಾ ಪಾಟೀಲ, ರೇಣುಕಾ ಹೊನಕಾಂಬಳೆ, ಶೃತಿ ಮಾಳಗೆ, ಶೈಲಾ ಢಾಲೆ, ರೋಹಿಣಿ ಮಾಳಿ, ಕಿರಿಯ ಅಭಿಯಂತ ತಿರುಪತಿ ಲಮಾಣಿ ಸೇರಿದಂತೆ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.