ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ರೇಣುಕಾ ವಿಜಯಕುಮಾರ ಶೇಖದಾರ ಅವರಿಗೆ 10 ಲಕ್ಷ ರೂ. ಚೆಕ್ ವಿತರಿಸಿದರು. ಸುರೇಶ ಬಿರಾದಾರ, ಬಸವರಾಜ ಕಳಸಗೊಂಡ ಇತರರಿದ್ದರು. 
ಜಿಲ್ಲೆ

ಶೇಖದಾರ ಕುಟುಂಬಕ್ಕೆ 10 ಲಕ್ಷ ರೂ.ಚೆಕ್

ಚಿಕ್ಕೋಡಿ, ಬೆಳಗಾವಿ: ಸದಸ್ಯರಿಗೆ ಮತ್ತು ಶಾಖಾ ಸಲಹಾ ಸಮಿತಿ ಸದಸ್ಯರಿಗೆ ನೆರವಾಗುವ ಉದ್ದೇಶದಿಂದ ಜೊಲ್ಲೆ ಗ್ರೂಪ್‌ನ ಅಂಗ ಸಂಸ್ಥೆ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ವಿಮೆ ಪರಿಹಾರ ಯೋಜನೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ವಿಜಯಪುರ ನಗರದಲ್ಲಿ ಸೊಸೈಟಿ ವಿಜಯಪುರ ಶಾಖಾ ಸಲಹಾ ಸಮಿತಿ ನಿರ್ದೇಶಕ ವಿಜಯಕುಮಾರ ಸಂಗಪ್ಪ ಶೇಖದಾರ ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ಬುಧವಾರ ಅವರ ಕುಟುಂಬಕ್ಕೆ ಸಂಸ್ಥೆಯಿಂದ 10 ಲಕ್ಷ ರೂ. ಚೆಕ್ ವಿತರಿಸಿ ಮಾತನಾಡಿದ ಅವರು, ವಿಜಯಕುಮಾರ ಸಂಸ್ಥೆ ಬೆಳವಣಿಗೆಗೆ ಸಾಕಷ್ಟು ಸಲಹೆ, ಸೂಚನೆ ನೀಡಿದ್ದರು.

ಅವರನ್ನು ಕಳೆದುಕೊಂಡಿರುವುದು ದುಃಖದ ಸಂಗತಿ ಎಂದರು. ಸುರೇಶ ಬಿರಾದಾರ, ಬಸವರಾಜ ಕಳಸಗೊಂಡ ಹಾಗೂ ಶಾಖೆಯ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ಇದ್ದರು.