ಜಿಲ್ಲೆ

ಶೇಂಗಾ ಬಣವೆಗೆ ಬೆಂಕಿ

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ-ಹರದಗಟ್ಟಿ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಒಕ್ಕಲಿಗಾಗಿ ಸಂಗ್ರಹಿಸಿದ್ದ 15 ಟ್ರ್ಯಾಕ್ಟರ್​ನಷ್ಟು ಶೇಂಗಾ ಬಳ್ಳಿಯ ಬಣವೆಗೆ ಶನಿವಾರ ನಸುಕಿನ ವೇಳೆ ದುಷ್ಕರ್ವಿುಗಳು ಬೆಂಕಿ ಹಚ್ಚಿದ ಪರಿಣಾಮ ಸಂಪೂರ್ಣ ಸುಟ್ಟು ಕರಕಲಾಗಿದೆ.

ಅಡರಕಟ್ಟಿ ಗ್ರಾಮದ ನಿಂಗಪ್ಪ ದೇವಪ್ಪ ಮಾಗಡಿ ಎಂಬುವವರು ತಮ್ಮ 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ ಬಳ್ಳಿಯನ್ನು ಒಕ್ಕಲಿಗಾಗಿ ಒಂದೆಡೆ ಸಂಗ್ರಹಿಸಿದ್ದರು. ಸಾವಿರಾರು ರೂ. ವ್ಯಯಿಸಿ ಬೆಳೆದಿದ್ದ ಅಂದಾಜು 2 ಲಕ್ಷ ರೂ. ಮೌಲ್ಯದ ಶೇಂಗಾ ಬಣವೆ ಸುಟ್ಟು ಕರಕಲಾಗಿರುವುದರಿಂದ ನಿಂಗಪ್ಪನಿಗೆ ದಿಕ್ಕು ತೋಚದಂತಾಗಿದೆ.

ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ, ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರೂ ಪ್ರಯೋಜನವಾಗಲಿಲ್ಲ. ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.