ಶೃಂಗೇರಿ ಪಟ್ಟಣದಲ್ಲಿ ಬುಧವಾರ ಸುರಿದ ಮಳೆಯಿಂದ ಸಂಚಾರ ವಿರಳವಾಗಿತ್ತು.  
ಜಿಲ್ಲೆ

ಶೃಂಗೇರಿಯಲ್ಲಿ ವರ್ಷಧಾರೆ

ಶೃಂಗೇರಿ: ತಾಲೂಕಿನ ಬಹುತೇಕ ಭಾಗದಲ್ಲಿ ಬುಧವಾರ ವರ್ಷಧಾರೆಯಾಗಿದೆ. ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ನೆಮ್ಮಾರ್, ಮೆಣಸೆ, ಅಡ್ಡಗದ್ದೆ, ಬುಕುಡಿಬೈಲು, ಕೆರೆಕಟ್ಟೆ, ವಳಲೆ ಮಾವಿನಕಾಡು, ಸಿರಿಮನೆ ಮುಂತಾದೆಡೆ ಸಾಧಾರಣ ಮಳೆಯಾಗಿದೆ.

ಕಳೆದ ವಾರವಷ್ಟೇ ಮಳೆಯಾಗಿದ್ದು, ಈಗ ಮತ್ತೆ ಮತ್ತೆ ಮಳೆಯಾಗಿರುವುದು ರೈತರಿಗೆ ಸಂತಸ ತಂದಿದೆ. ಕಾಫಿ ಬೆಳೆಗೆ ಮಳೆ ಅನುಕೂಲವಾಗಿದ್ದು, ಕಾಫಿ ಕಾಯಿ ಕಟ್ಟಲು ಸಹಾಯಕವಾಗಿದೆ. ತಾಲೂಕಿನಲ್ಲಿ 2024ರಲ್ಲಿ ಬೇಸಿಗೆಯಲ್ಲಿ ಮಳೆ ಆಗದೆ ತೀವ್ರ ತೊಂದರೆಯಾಗಿತ್ತು. ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಅಡಕೆ, ಕಾಫಿಗೆ ಕೊಳೆ ರೋಗ ಕಾಣಿಸಿಕೊಂಡಿತ್ತು. ಅಡಕೆಗೆ ಎಲೆ ಚುಕ್ಕಿ ರೋಗ ಹೆಚ್ಚಿತ್ತು. ಈ ವರ್ಷ ಎರಡು ತಿಂಗಳು ಮಳೆಯಾಗದಿರುವುದು ಕಾಫಿಗೆ ಅನುಕೂಲವಾಗಿದೆ. ಗಿಡ ಬಾಡಿದ ನಂತರ ಮಳೆಯಾಗಿರುವುದು ಉತ್ತಮ ಫಸಲು ನಿರೀಕ್ಷಿಸಲಾಗಿದೆ.