-ಶೃಂಗೇರಿ ಶ್ರೀ ಶಾರದಾಪೀಠದಲ್ಲಿ ವಿವಿಧ ಪ್ರಾಂತ್ಯಗಳಿಂದ ಆಗಮಿಸಿದ್ದ ಪ್ರವಾಸಿಗರು.  
ಜಿಲ್ಲೆ

ಶೃಂಗೇರಿಗೆ ಪ್ರವಾಸಿಗರ ದಂಡು

ಶೃಂಗೇರಿ: ಶ್ರೀ ಶಾರದಾಪೀಠಕ್ಕೆ ಭಾನುವಾರ ವಿವಿಧೆಡೆಯಿಂದ ಆಗಮಿಸಿದ ಪ್ರವಾಸಿಗರು ಶ್ರೀ ಶಾರದೆ, ಶ್ರೀ ಶಕ್ತಿಗಣಪತಿ, ಶ್ರೀ ತೋರಣಗಣಪತಿ, ಶ್ರೀ ಶಂಕರಾಚಾರ್ಯ ದೇವಾಲಯಗಳನ್ನು ವೀಕ್ಷಿಸಿ ವಿಶೇಷ ಪೂಜೆ ಸಲ್ಲಿಸಿದರು.

ಸಾಲು-ಸಾಲು ರಜೆ ಇದ್ದ ಕಾರಣ ಶ್ರೀಮಠದ ಹಾಗೂ ಹೋಟೆಲ್‌ಗಳ ವಸತಿಗೃಹಗಳು ಪ್ರವಾಸಿಗರಿಂದ ತುಂಬಿದ್ದವು. ಜಗದ್ಗುರುಗಳ ಚಾರ್ತುಮಾಸ್ಯ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ ವಿವಿಧೆಡೆಯಿಂದ ಆಗಮಿಸಿದ ಸದ್ಭಕ್ತರು ಪಾದಪೂಜೆ, ಭಿಕ್ಷಾವಂದನೆ ನೆರವೇರಿಸಿ ಯತಿಗಳ ಆರ್ಶೀವಾದ ಪಡೆದರು.
ಮಳೆಯಿಲ್ಲದ ಕಾರಣ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಗಾಂಧಿ ಮೈದಾನದ ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಪೂಜೆ ಸಲ್ಲಿಸಿದ ಬಳಿಕ ಸದ್ಭಕ್ತರು ಭೋಜನ ಸ್ವೀಕರಿಸಿದರು. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಶೃಂಗೇರಿಗೆ ಆಗಮಿಸಿದ್ದು ಪಟ್ಟಣದ ಹೃದಯಭಾಗದಲ್ಲಿರುವ ಈಶ್ವರಗಿರಿ, ಮಳೆದೇವರು ಖ್ಯಾತಿಯ ಕಿಗ್ಗಾ ಶ್ರೀ ಋಷ್ಯಶೃಂಗದೇವಸ್ಥಾನ, ವಿದ್ಯಾರಣ್ಯಪುರ ಸಮೀಪದ ಶ್ರೀ ದುರ್ಗಾದೇವಾಲಯಕ್ಕೆ ಭೇಟಿ ನೀಡಿದರು.