ಜಿಲ್ಲೆ

ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳಿಗೆ ಹಿಂಸೆ : ಖಾಸಗಿ ಕಾಲೇಜಿನಿಂದ ಅಮಾನವೀಯ ನಡೆ

ಆಡಳಿತ ಮಂಡಳಿಯನ್ನು ಪ್ರಶ್ನಿಸಿದ ಕಾರಣಕ್ಕೆ ಮುನಿವೆಂಕಟಪ್ಪ ಎಂಬವರ ಮಗಳಿಗೆ ಕೈಬರಹದ ಮೂಲಕ ಮಾ.1ರವರೆಗೆ ನೀಡಿರುವ ಪ್ರವೇಶ ಪತ್ರ.

ವಿಜಯವಾಣಿ ಸುದ್ದಿಜಾಲ ಕೋಲಾರ
ಖಾಸಗಿಯವರು ದಾಖಲಾತಿ ಸಂದರ್ಭ ವಿದ್ಯಾರ್ಥಿ ಹಾಗೂ ಪಾಲಕರ ಮೇಲೆ ತೋರಿಸುವ ಪ್ರೀತಿ, ಪರೀಕ್ಷೆ ಸಂದರ್ಭಗಳಲ್ಲಿ ತೋರಿಸುವುದಿಲ್ಲ, ಬದಲಾಗಿ ಹಣದ ವಸೂಲಿಗೆ ಬೀಳುತ್ತಾರೆ ಎಂಬುದಕ್ಕೆ ಸಾಯಾಗಿ ನಗರದ ಖಾಸಗಿ ಕಾಲೇಜೊಂದರಲ್ಲಿ ಶುಲ್ಕ ಕಟ್ಟದ ಕಾರಣಕ್ಕಾಗಿ ಪ್ರಥಮ ಪಿಯುಸಿ 20 ವಿದ್ಯಾರ್ಥಿಗಳಿಗೆ ಪರೀೆಗೆ ಪ್ರವೇಶ ನೀಡದೆ ಅರ್ಧ ಗಂಟೆ ತಡವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರುವ ಘಟನೆ ಸೋಮವಾರ ನಡೆದಿದೆ.
ನಗರದ ಹೊರವಲಯದಲ್ಲಿರುವ ಖಾಸಗಿ ಪದವಿಪೂರ್ವ ಕಾಲೇಜಿಗೆ ವಿದ್ಯಾರ್ಥಿ ಪಾಲಕ ಮುನಿವೆಂಕಟಪ್ಪ ಎಂಬುವವರು ಮಂಗಳವಾರ ತೆರಳಿ ನಮ್ಮ ಮಗಳಿಗೆ ಪ್ರವೇಶ ಪತ್ರ ನೀಡುತ್ತೀರಾ ಅಥವಾ ಇಲ್ಲ ಹೇಳಿ. ಪರೀಕ್ಷೆ ಅವಕಾಶ ನೀಡದಿದ್ದರೆ ನನ್ನ ಮಗಳನ್ನು ವಾಪಸ್​ ಕರೆದುಕೊಂಡು ಹೋಗುತ್ತೇನೆ ಎಂದು ಎಚ್ಚರಿಸಿದ್ದಾರೆ.
ಸೋಮವಾರ ಇದೇ ರೀತಿ ಮಗಳಿಗೆ 30 ನಿಮಿಷ ಪ್ರವೇಶ ಪತ್ರ ನೀಡದೆ ಪರೀಕ್ಷೆ ವೇಳೆ ವ್ಯರ್ಥ ಮಾಡಿದ್ದೀರಿ. ಶುಲ್ಕ ನೀಡಲು ಈಗ ನನ್ನ ಬಳಿ ಹಣವಿಲ್ಲ. ಮಾ.5 ರಂದು ಕಟ್ಟುತ್ತೇನೆ ಎಂದು ತಿಳಿಸಿದರು. ಅದಕ್ಕೆ ಒಪ್ಪದ ಕಾಲೇಜಿನ ಪ್ರಾಂಶುಪಾಲರು ಅವಕಾಶ ನೀಡಿಲ್ಲ ಎನ್ನಲಾಗಿದೆ. ಕಾಲೇಜಿನ ಬಳಿ ಮಾಧ್ಯಮದವರು ಬರುತ್ತಾರೆ ಎಂಬ ವಿಷಯ ತಿಳಿದು ಪ್ರಾಂಶುಪಾಲರು ಅಲ್ಲಿಂದ ಪಲಾಯನವಾಗಿದ್ದಾರೆ. ಬಳಿಕ ಉಪನ್ಯಾಸಕರೊಬ್ಬರು ಪ್ರವೇಶ ಪತ್ರ ನೀಡಲು ಆಗುವುದಿಲ್ಲ. ಪರೀೆಗೆ ಹಾಜರಾಗಲು ಹಾಜರಾತಿ ಪತ್ರ ನೀಡುತ್ತೇವೆ ಎಂದು ತಿಳಿಸಿ ಪರೀಕ್ಷೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಉಪನ್ಯಾಸಕ ಶರೀಫ್​ ಮಾಧ್ಯಮದವರಿಗೆ ಉತ್ತರಿಸಿ, ಪಾಲಕರಿಗೆ 7&8 ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡುತ್ತೇವೆ. ಆದರೂ ಶುಲ್ಕ ಕಟ್ಟದಿದ್ದಲ್ಲಿ ಪರೀಕ್ಷೆ ಸಂದರ್ಭದಲ್ಲಿ ಬಿಗಿ ಮಾಡಿದಲ್ಲಿ ಶುಲ್ಕ ಬರುತ್ತದೆ ಎಂದು ಆಡಳಿತ ಮಂಡಳಿ ಸೂಚನೆ ಮೇರೆಗೆ ಒತ್ತಾಯಿಸುತ್ತೇವೆ ಎಂದರು.

ಮಾರ್ಮಿಕ ಚೀಟಿ: ಕಾಲೇಜಿನಲ್ಲಿ ಶುಲ್ಕ ಕಟ್ಟದೇ ಇರುವ ಮಕ್ಕಳಿಗೆ ಪ್ರತಿದಿನ ಒತ್ತಡ ಹೇರಲಾಗುತ್ತಿದೆ. ಅದಕ್ಕಾಗಿ ವಿದ್ಯಾರ್ಥಿಗಳಿಗೆ ದಿನಾಲೂ ಮಾರ್ಮಿಕವಾಗಿ ಬರೆದ ಚೀಟಿಗಳನ್ನು ನೀಡಿ ಪರೀಕ್ಷೆ ಕೂರಿಸಲಾಗುತ್ತಿದೆ. ಕಾಲೇಜಿನ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ ಪೋಷಕ ಮುನಿವೆಂಕಟಪ್ಪ ಅವರಿಗೆ ಮಾ.1ರವರೆಗೆ ಮಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡುವ ಮಾರ್ಮಿಕ ಚೀಟಿ ನೀಡಿದ್ದಾರೆ.

ಕಾಲೇಜಿನಲ್ಲಿ ಮಕ್ಕಳಿಗೆ ಪರೀಕ್ಷೆ ಸಂದರ್ಭದಲ್ಲಿ ಶುಲ್ಕ ಕೊಡಲಿಲ್ಲ ಎಂದು ಹಿಂಸೆ ಕೊಡುವುದು ಮತ್ತು ಪರೀಕ್ಷೆಗೆ ತಡವಾಗಿ ಕೂರಿಸುವುದು ಹಾಗೂ ಪರೀಕ್ಷೆಯಿಂದ ಹೊರ ಕಳುಹಿಸುವ ಕೆಲಸ ಮಾಡುವುದು ಕಾನೂನು ಬಾಹಿರ ಎಂದು ಎಲ್ಲಾ ಕಾಲೇಜುಗಳಿಗೂ ಸುತ್ತೋಲೆ ಕಳುಹಿಸಲಾಗಿದೆ. ಸದರಿ ಪಿಯು ಕಾಲೇಜಿನಲ್ಲಿ ನಡೆದಿರುವ ಟನೆ ನನ್ನ ಗಮನಕ್ಕೆ ಬಂದಿಲ್ಲ. 2&3 ಕಾಲೇಜುಗಳಲ್ಲಿ ಈ ರೀತಿ ಮಾಡುತ್ತಿದ್ದುದಕ್ಕೆ ಎಚ್ಚರಿಕೆ ನೀಡಲಾಗಿದೆ. ರಾಮಚಂದ್ರಪ್ಪ, ಪಿಯು ಡಿಡಿಪಿಐ