ಶಿಡ್ಲಘಟ್ಟ: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಡಾ.ವೈ.ನವೀನ್ಭಟ್ ಹೇಳಿದರು.
ತಾಲೂಕಿನ ಭಕ್ತರಹಳ್ಳಿ ಹಾಗೂ ಕುಂಭಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಲುವೆ ಅಭಿವೃದ್ಧಿ ಕಾಮಗಾರಿ, ಶುದ್ಧ ನೀರಿನ ಘಟಕ, ಪೈಪ್ಲೈನ್ ವ್ಯವಸ್ಥೆ, ಜೆಜೆಎಂ ಕಾಮಗಾರಿ, ಟ್ಯಾಂಕ್ ಸ್ವಚ್ಛತೆ ವೀಕ್ಷಿಸಿ ಜನರಿಗೆ ಪೂರೈಸುವ ಕುಡಿಯುವ ನೀರಿನ ವಿಚಾರದಲ್ಲಿ ರ್ನಿಲಕ್ಷ$್ಯ ಬೇಡ. ಕಾಲಕಾಲಕ್ಕೆ ಟ್ಯಾಂಕ್ ಸ್ವಚ್ಛತೆ ಬಗ್ಗೆ ನಿಗಾವಹಿಸಿ ನೀರು ಸರಬರಾಜು ಮಾಡಬೇಕು ಎಂದರು.
ಕುಂಭಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಂಜೀವಿನಿ ಭವನ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಾದರಿ ಅಂಗನವಾಡಿಗಳಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಎಇಇ ಪುರುಷೋತ್ತಮ್, ಸಿಡಿಪಿಒ ವಿದ್ಯಾ ವಸ್ತದ್, ಭಕ್ತರಹಳ್ಳಿ ಪಿಡಿಒ ಅಂಜನ್ಕುಮಾರ್ ಹಾಗೂ ಕುಂಭಿಗಾನಹಳ್ಳಿ ಪಿಡಿಒ ಪ್ರಶಾಂತ್ ಕುಮಾರ್, ಇಂಜಿನಿಯರ್ ಗೌತಮ್ ರಾಜ್, ಕಾವ್ಯಾ, ಮೇಘನಾ ಇದ್ದರು.