ಗುಡಿಬಂಡೆ : ತಾಲೂಕಿನ ಹಂಪಸಂದ್ರ ಡ್ಯಾಂನಿಂದ 9 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಶೀಘ್ರ ಪ್ರಾರಂಭಿಸಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ಹಂಪಸಂದ್ರ ಗ್ರಾಪಂ ಆವರಣದಲ್ಲಿ ನಿರ್ಮಿಸಿರುವ ಉದ್ಯಾನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಎಲ್ಲ ಗ್ರಾಮಗಳಿಗು ಶುದ್ಧ ಕುಡಿಯುವ ನೀರು ಒದಗಿಸುವುದು ನನ್ನ ಮೂಲ ಧ್ಯೇಯ. ಹಂಪಸಂದ್ರ ಗ್ರಾಮಕ್ಕೆ ನೂರಾರು ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯಗಳಾದ ನೀರಿನ ಘಟಕ, ಅಂಬೇಡ್ಕರ್ ಭವನ, ಅಂಗನವಾಡಿ ಕೇಂದ್ರ ಸೇರಿ ಸಿಸಿ ರಸ್ತೆಗಳನ್ನು ನಿರ್ಮಿಸಿದ್ದು ಇನ್ನೂ ಹೆಚ್ಚಿನ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ನೀಡುವುದಾಗಿ ಹೇಳಿದರು.
ತಾಪಂ ಸದಸ್ಯ ಆದಿನಾರಾಯಣಪ್ಪ, ಜಿಪಂ ಸದಸ್ಯೆ ಗಾಯಿತ್ರಿ ನಂಜುಂಡಪ್ಪ, ಹಂಪಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೆಂಕಟಮ್ಮ, ಉಪಾಧ್ಯಕ್ಷ ಬಾಲಕೃಷ್ಣರೆಡ್ಡಿ, ಪಿಡಿಒ ಶ್ರೀನಿವಾಸ ಮೂರ್ತಿ, ಗ್ರಾಪಂ ಸದಸ್ಯರು ಇದ್ದರು.