ಚಿತ್ರದುರ್ಗ:ಕೈಗಳ ಶುಚಿತ್ವ,ಬಿಸಿಆಹಾರ,ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ಪರಿಸರದಿಂದ ವಾಂತಿ-ಭೇದಿ ಮತ್ತಿತರ ಕಾಯಿಲೆಗಳಿ ಂದ ರಕ್ಷಣೆ ಪಡೆಯಬಹುದೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು. ಜಿಲ್ಲಾಆಡಳಿತ,ಜಿಪಂ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಕವಾಡಿಗರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ,ಶಿಕ್ಷಕರು,ಅಂಗನವಾಡಿ ಕಾರ‌್ಯಕ ರ್ತೆಯರಿಗೆ ಸ್ವಚ್ಛತೆ ಕುರಿತಂತೆ ಏರ್ಪಡಿಸಿದ್ದ ಕಾರ‌್ಯಾಗಾರದಲ್ಲಿ ಅವರು ಮಾತನಾಡಿ,ಕಾಯಿಲೆಗಳ ನಿಯಂತ್ರಣಕ್ಕೆ ಪರಿಸರದ ಸ್ವಚ್ಛತೆ ಮುಖ್ಯವೆ ಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿದರು. ಕ್ಷೇತ್ರಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್,ರಂಗಾರೆಡ್ಡಿ,ಮುಖ್ಯಶಿಕ್ಷಕ ಟಿ.ರುದ್ರಪ್ಪ ಮತ್ತಿತರರು ಇದ್ದರು.