ಜಿಲ್ಲೆ

ಶುಚಿ, ರುಚಿ ಕಾಪಾಡಲು ತಾಕೀತು

ಚನ್ನಗಿರಿ: ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಹತ್ತಿರವಾದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ, ಉಪಾಹಾರಗಳು ರುಚಿ, ಶುಚಿಯಿಂದ ಕೂಡಿರುವಂತೆ ಶಾಸಕ ಶಿವಗಂಗಾ ಬಸವರಾಜ್ ತಾಕೀತು ಮಾಡಿದ್ದಾರೆ.

ಇಂದಿರಾ ಕ್ಯಾಂಟೀನ್‌ಗೆ ಗುರುವಾರ ಅಧಿಕಾರಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಬಡವರ ಹಸಿವು ನೀಗಿಸಲು ಈ ಯೋಜನೆ ಜಾರಿಗೆ ತಂದಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ಆಹಾರ ನೀಡಲಾಗುತ್ತಿದೆ ಎಂದರು.

ಬಿಜೆಪಿ ಸರ್ಕಾರದಲ್ಲಿ ಇಂದಿರಾ ಕ್ಯಾಂಟೀನ್ ಅಭಿವೃದ್ಧಿ ಕಾಣಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕ್ಯಾಂಟೀನ್‌ಗೆ ಕಳೆ ಬಂದಿದೆ ಎಂದು ಬಣ್ಣಿಸಿದರು.

ಕ್ಯಾಂಟೀನ್‌ಗಳಲ್ಲಿ ಉತ್ತಮ ಆಹಾರ ನೀಡಬೇಕು. ಬೇಕಾಬಿಟ್ಟಿ ತಯಾರಿಸಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.ಈ ಸಂದರ್ಭದಲ್ಲಿ ಶಾಸಕರು ಕೇಸರಿಬಾತ್ ಮತ್ತು ಉಪ್ಪಿಟ್ಟು ಸವಿದರು. ತಹಸೀಲ್ದಾರ್ ಪಿ.ಎಸ್. ಯರ‌್ರಿಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಉತ್ತಮ್, ಆಹಾರ ನಿರೀಕ್ಷಕ ಜಯರಾಂ, ಬಿಸಿಎಂ ಅಧಿಕಾರಿ ರವಿ ಇದ್ದರು.