ಹಾಸನ: ದುನಿಯಾ ವಿಜಯ್ ಅಭಿನಯದ ಭೀಮ ಚಿತ್ರ ಶುಕ್ರವಾರ ಬಿಡುಗಡೆಯಾಗಿರುವ ಚಿತ್ರದಲ್ಲಿ ನಾನೂ ಪಾತ್ರ ಮಾಡಿದ್ದು, ಎಲ್ಲರೂ ಥಿಯೇಟರ್‌ಗೆ ಹೋಗಿ ಚಿತ್ರ ವೀಕ್ಷಣೆ ಮಾಡುವ ಮೂಲಕ ನನಗೆ ಪ್ರೋತ್ಸಾಹಿಸಬೇಕು ಎಂದು ಬಾಲ ನಟಿ ಮಿನುಗು ಎಚ್.ಸಂತೋಷ್ ಮನವಿ ಮಾಡಿದಳು.
ನಾನು ಸಕಲೇಶಪುರ ತಾಲೂಕು ಹಾನುಬಾಳು ಗ್ರಾಮದ ಸಂತೋಷ್-ಪ್ರತಿಮಾ ದಂಪತಿ ಪುತ್ರಿ. ಬಾಗೆ ಗ್ರಾಮದಲ್ಲಿರುವ ಜೆಎಸ್‌ಎಸ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದೇನೆ.ನನಗೆ ನಟನೆ ಎಂದರೆ ತುಂಬಾ ಇಷ್ಟ. ಹೆಬ್ಬಸಾಲೆಯ ಪ್ರಶಾಂತ್ ಅಂಕಲ್ ನನಗೆ ಅವಕಾಶ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಒಮ್ಮೆ ದುನಿಯಾ ವಿಜಯ್ ಸರ್ ರೆಸಾರ್ಟ್‌ವೊಂದಕ್ಕೆ ಬಂದಾಗ ನಿನಗೊಂದು ಅವಕಾಶ ಕೊಡುವೆ ಎಂದು ಭರವಸೆ ನೀಡಿದ್ದರು.
ಅದರಂತೆ ಭೀಮ ಸಿನಿಮಾದಲ್ಲಿ ಉತ್ತಮ ಪಾತ್ರ ನೀಡಿ,ಎಲ್ಲಾ ರೀತಿಯಲ್ಲೂ ಸಪೋರ್ಟ್ ಮಾಡಿ ಹರಸಿದ್ದಾರೆ ಎಂದು ಧನ್ಯವಾದ ಹೇಳಿದಳು.
ಸಿನಿಮಾದ ನನ್ನ ಪಾತ್ರ ಎಲ್ಲ ಅಕ್ಕ, ಅಣ್ಣಂದಿರಿಗೆ ಇಷ್ಟ ಆಗಲಿದೆ. ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ನೋಡಿ ಎಂದು ವಿನಂತಿಸಿದಳು. ಈ ಸಿನಿಮಾದಿಂದ ನಾನು ತುಂಬಾ ಕಲಿತಿದ್ದೇನೆ. ಮುಂದೆಯೂ ಅವಕಾಶ ಸಿಕ್ಕರೆ ಸಿನಿಮಾಗಳಲ್ಲಿ ನಟಿಸುವೆ ಎಂದಳು.
ತಾಯಿ ಪ್ರತಿಮಾ ಮಾತನಾಡಿ, ಭೀಮ ಸಿನಿಮಾದಲ್ಲಿ ಉತ್ತಮ ಸಂದೇಶ ಇದೆ. ನಾವು ಹಾಗೂ ಶಾಲಾ-ಕಾಲೇಜು ಆಡಳಿತ ಮಂಡಳಿಯವರು ಮಕ್ಕಳಿಕೆ ಸಂಸ್ಕಾರ ಕಲಿಸಿ ಅವರನ್ನು ಎಲ್ಲಾ ರೀತಿಯಲ್ಲೂ ಗಟ್ಟಿವಂತರಾಗಿ ಬೆಳೆಸಬೇಕು ಎಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ತಂದೆ ಸಂತೋಷ್ ಇದ್ದರು.