ಬಾಗಲಕೋಟೆ: ಪ್ರಸಕ್ತ ಸಾಲಿನ ಕಬ್ಬಿನ ಹಂಗಾಮು ಆರಂಭವಾಗುವ ಮುನ್ನ ಕಬ್ಬು ಕಟಾವುದಾರರು, ಅಽಕಾರಿಗಳ, ಕಾರ್ಖಾನೆ ಮಾಲೀಕರ, ಟ್ರ‍್ಯಾಕ್ಟರ್ ಮಾಲೀಕರ ಸಭೆ ಆಯೋಜನೆ ಮಾಡಿ ನ್ಯಾಯಯುತ ಬೆಲೆ ನಿಗದಿ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಎಚ್ಚರಿಕೆ ನೀಡಿದರು.
ಮುಧೋಳ ನಗರದ ಪ್ರವಾಸಿ ಮಂದಿರದ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ೨೦೨೩-೨೪ನೇ ಸಾಲಿನಲ್ಲಿ ಮಹಾರಾಷ್ಟç ಗ್ಯಾಂಗಗೆ ಪ್ರತಿ ಟನ್‌ಗೆ ೫೧೯ ರೂ. ಹಾಗೂ ಸ್ಥಳೀಯ ಗ್ಯಾಂಗ್‌ದವರಿಗೆ ೪೩೯ ರೂ. ನೀಡಲಾಗಿದೆ. ಸ್ಥಳೀಯ ಗ್ಯಾಂಗ್‌ಗಳಿಗೆ ೭೫ ರೂ. ವ್ಯತ್ಯಾಸವಾಗುತ್ತಿದೆ. ಕೂಡಲೇ ಸರಿ ಮಾಡಿ ಟ್ರ‍್ಯಾಕ್ಟರ್ ಮಾಲೀಕರಿಗೆ ನ್ಯಾಯಯುತ ಬೆಲೆ ನೀಡಬೇಕು. ಪ್ರಸಕ್ತ ವರ್ಷವಯ ಏಕ ರೂಪದ ಬೆಲೆ ನಿಗಽ ಪಡಿಸಬೇಕು. ಹೀಗಾಗಿ ಶೀಘ್ರದಲ್ಲಿ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದುಂಡಪ್ಪ ಯರಗಟ್ಟಿ, ರಮೇಶ ಹೂಗಾರ, ಈರಪ್ಪ ಹಂಚನಾಳ, ಬಾಬುಗೌಡ ಪಾಟೀಲ್, ರಮೇಶ ಹುನಸಿಕಟ್ಟಿ , ಮಲ್ಲು ರಡ್ಯಾರಟ್ಟಿ, ನಾಗಪ್ಪ ಪೂಜಾರ ಸೇರಿದಂತೆ ಇತರರು ಇದ್ದರು
======
ಬಾಕ್ಸ್..
ಕಬ್ಬು ಬೆಳೆಗಾರರ, ರೈತರು, ಬ್ಯಾಂಕ್ ಕಟಬಾಕಿದಾರರು, ಕಬ್ಬು ಕಟಾವುದಾರರ ಸಭೆ ಅ.೯ ರಂದು ಕರೆಯಲಾಗುತ್ತಿದೆ ಜೊತೆಗೆ ಕಾರ್ಖಾನೆ ಮಾಲೀಕರ ಸಭೆ ಅ.೮ ರಂದು ಬಾಗಲಕೋಟೆ ಹಮ್ಮಿಕೊಳ್ಳಲಾಗಿದೆ ಅಂತ ಜಿಲ್ಲಾಽಕಾರಿ ಸಂಗಪ್ಪ ಎಂ ತಿಳಿಸಿದ್ದಾರೆ ಎಂದು ಸಭೆಯಲ್ಲಿ ಇದ್ದ ನಾಯಕರು ಹೇಳಿದರು.
=======