ಬೋರಗಾಂವ: ಅರಿಹಂತ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ೧,೪೫೮ ಕೋಟಿ ರೂ. ಠೇವಣಿಯ ಮೈಲಿಗಲ್ಲು ದಾಟಿದ್ದು, ಸಂಸ್ಥೆಯು ಶೀಘ್ರದಲ್ಲೇ ಬಹು-ರಾಜ್ಯ ಕಾಯ್ದೆ ಮೂಲಕ ಗೋವಾ ರಾಜ್ಯದಲ್ಲೂ ಕಾರ್ಯಾಚರಣೆ ವಿಸ್ತರಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಭಿನಂದನ ಪಾಟೀಲ ಮಾಹಿತಿ ನೀಡಿದರು.
ಪಟ್ಟಣದ ಶ್ರೀ ಅರಿಹಂತ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷ ರಾವ್‌ಸಾಹೇಬ ಪಾಟೀಲ ನೇತೃತ್ವದಲ್ಲಿ ಸಂಸ್ಥೆ ೧೪.೭೬ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಮಹಾರಾಷ್ಟ್ರದಲ್ಲಿ ಇನ್ನೂ ೧೫ ಮತ್ತು ಕರ್ನಾಟಕದಲ್ಲಿ ೨೪ ಶಾಖೆ ಪ್ರಾರಂಭಿಸಲಿದ್ದೇವೆ. ಸಂಸ್ಥೆಯು ೧೭,೯೩೭ ಸದಸ್ಯರು, ೬.೩೬ ಕೋಟಿ ಷೇರು ಬಂಡವಾಳ, ೩೫೫.೮೨ ಕೋಟಿ ರೂ. ಹೂಡಿಕೆ, ೧೪೫೮.೨೩ ಕೋಟಿ ರೂ. ಠೇವಣಿ ಹೊಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಠೇವಣಿಯಲ್ಲಿ ೨೫೮ ಕೋಟಿ ರೂ. ಹೆಚ್ಚಳವಾಗಿದೆ. ೧೦೯೮.೪೧ ಕೋಟಿ ಸಾಲ ವಿತರಿಸಲಾಗಿದೆ. ಸದಸ್ಯರು ಮತ್ತು ರೈತರ ಅಭಿವೃದ್ಧಿಗಾಗಿ ವಿವಿಧ ಸಾಲ ಮತ್ತು ಠೇವಣಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಸಕಾಲಿಕ ಸಾಲ ಒದಗಿಸಿದ್ದಕ್ಕಾಗಿ ಅಡಿಟ್ ವರ್ಗದಲ್ಲಿ ಅ ಪ್ರಶಸ್ತಿ ಪಡೆದಿದೆ. ಸಂಸ್ಥೆಯು ತನ್ನ ಬೆಳವಣಿಗೆಗೆ ಸದಸ್ಯರೊಂದಿಗೆ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ವಿಶೇಷ ಸಹಕಾರ ಸಿಕ್ಕಿದೆ ಎಂದು ತಿಳಿಸಿದರು.
ಸಂಸ್ಥೆಯ ಸಿಇಒ ಅಶೋಕ್ ಬಂಕಾಪುರೆ ಮಾತನಾಡಿ, ಸಂಸ್ಥೆಯು ಒಟ್ಟು ೬೧ ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಸತೀಶ ಪಾಟೀಲ, ನಿರ್ದೇಶಕ ಸುಭಾಷ ಶೆಟ್ಟಿ, ಅಭಯಕುಮಾರ ಕರೋಲೆ, ಜೈಪಾಲ ನಾಗಾವೆ, ಅಪ್ಪಾಸಾಹೇಬ ಕಡೋಲೆ, ಶರದಕುಮಾರ ಲಡಗೆ, ಪೀರಗೊಂಡ ಪಾಟೀಲ, ಭುಜಗೊಂಡ ಪಾಟೀಲ, ಸಂದೀಪ ಪಾಟೀಲ, ಬಾಬಾಸಾಹೇಬ ಅಫ್ರಾಜ, ಶ್ರೀಕಾಂತ ವಸವಾಡೆ, ಶಿವಾನಂದ ರಾಜಮಾನೆ, ಸಿಇಒ ಅಶೋಕ ಬಂಕಾಪುರೆ, ಅಭಿನಂದನ ಬೆನಾಡೆ, ಅಭಯಕುಮಾರ ಖೋತ, ಭರತ ಗುಂಡೆ, ಪ್ರಕಾಶ ಜಂಗಟೆ ಉಪಸ್ಥಿತರಿದ್ದರು.