ಸೋಮವಾರಪೇಟೆ ಜೇಸಿ ಸಂಸ್ಥೆ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ಉಚಿತ ತಪಾಸಣಾ ಶಿಬಿರ ನಡೆಯಿತು. ರುಬಿನಾ, ಪ್ರಕಾಶ್, ನಯನ, ಗುರುಪ್ರಸಾದ್, ರವಿಕುಮಾರ್ ಇದ್ದರು. 
ಜಿಲ್ಲೆ

ಶಿಸ್ತುಬದ್ಧ ಜೀವನದಿಂದ ರೋಗಮುಕ್ತರಾಗಲು ಸಾಧ್ಯ

ರವಿಕುಮಾರ್ ಪಿ. ಕೆ

ಸೋಮವಾರಪೇಟೆ: ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬೇಕು. ಶಿಸ್ತು ಹಾಗೂ ಕ್ರಮಬದ್ಧ ಜೀವನ ನಡೆಸಿದರೆ ರೋಗಮುಕ್ತರಾಗಿ ಬದುಕಬಹುದು ಎಂದು ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸತೀಶ್‌ಕುಮಾರ್ ತಿಳಿಸಿದರು.

ಜೇಸಿ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಚೈತ್ರ ಜೇಸಿ ಸಪ್ತಾಹದ ಅಂಗವಾಗಿ ಆಟೋ, ಕೆಟಿಡಿಒ ಮತ್ತು ವಾಹನ ಚಾಲಕರ ಸಂಘದ ಸದಸ್ಯರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಾಹನ ಚಾಲಕರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಸಮತೋಲನ ಆಹಾರ ಹಾಗೂ ಪ್ರತಿನಿತ್ಯ ವಾಯುವಿಹಾರದಿಂದ ಆರೋಗ್ಯ ವೃದ್ಧಿಸುತ್ತದೆ. ದುಶ್ಚಟಗಳಿಂದ ದೂರವಿರಬೇಕು. ಮಧುಮೇಹ, ರಕ್ತದೊತ್ತಡವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಕಿಡ್ನಿ ಹಾಗೂ ಲಕ್ವಾದಂತಹ ಸಮಸ್ಯೆಗೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜೇಸಿ ಅಧ್ಯಕ್ಷೆ ಎಂ.ಎ.ರುಬೀನಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಆಗುತ್ತಿರುವ ಏರುಪೇರುಗಳು, ಕೆಲಸದ ಒತ್ತಡದ ನಡುವೆ ಆರೋಗ್ಯವನ್ನು ಕಡೆಗಣಿಸುವ ನಾವು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಂಡರೆ ಅನಾರೋಗ್ಯದಿಂದ ಮುಕ್ತರಾಗಿ ಉತ್ತಮ ಆರೋಗ್ಯ ಪಡೆಯಬಹುದು ಎಂದರು.

ಜೇಸಿ ಮಾಜಿ ಅಧ್ಯಕ್ಷ ಕೆ.ಎ.ಪ್ರಕಾಶ್, ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಜಿ.ಸುರೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಕೆಟಿಡಿಒ ಸಹ ಕಾರ್ಯದರ್ಶಿ ರಾಮಕೃಷ್ಣ, ಜೂನಿಯರ್ ಜೇಸಿ ಅಧ್ಯಕ್ಷೆ ಎಸ್.ಎ. ರಿಶಾ, ಜೇಸಿ ಸಂಸ್ಥೆಯ ವಿನುತ ಸುದೀಪ್, ನಯನ ಲೋಕೇಶ್, ರವಿಕುಮಾರ್ ಇದ್ದರು.