ಬಾಗಲಕೋಟೆ ನಗರದ ಬಿವಿವಿ ಸಂಘದ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ೨೦೨೪-೨೫ ನೇ ಸಾಲಿನ ಕಾಲೇಜು ಸಂಸತ್ತು ಪ್ರಾಚಾರ್ಯ ಡಾ.ಅರುಣ ಹೂಲಿ ಉದ್ಘಾಟಿಸಿದರು. ಪ್ರಾಧ್ಯಾಪಕ ಡಾ.ರವಿ.ಕೋಟೆಣ್ಣವರ, ಉಪನ್ಯಾಸಕ ಡಾ ವಿನೋದ.ಕೆ ಉಪಸ್ಥಿತರಿದ್ದರು.  
ಜಿಲ್ಲೆ

ಶಿಸ್ತು, ಸಂಯಮ, ದೇಶಭಕ್ತಿ ಮೈಗೂಡಿಸಿಕೊಳ್ಳಿ

ಬಾಗಲಕೋಟೆ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ನಾಯಕತ್ವ, ಮತ್ತು ದೇಶಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅರುಣ ಹೂಲಿ ಹೇಳಿದರು.

ನಗರದ ಬಿವಿವಿ ಸಂಘದ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ೨೦೨೪-೨೫ ನೇ ಸಾಲಿನ ಕಾಲೇಜು ಸಂಸತ್ತು ಉದ್ಘಾಟಿಸಿ ಮಾತನಾಡಿದರು.

ಯುವ ಧ್ವನಿಗಳು ರಾಷ್ಟ್ರದ ಪರಿವರ್ತನೆಗಾಗಿ ತೊಡಗಿಸಿಕೊಳ್ಳಬೇಕು. ಈ ಯುವ ಸಂಸತ್ತುಗಳು ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸುವ ಗುರಿಯನ್ನು ಹೊಂದಿವೆ, ಶಿಸ್ತು, ಇತರರ ದೃಷ್ಟಿಕೋನದ ಸಹಿಷ್ಣ್ಣುತೆಯ ಆರೋಗ್ಯಕರವಾದ ಅಭ್ಯಾಸಗಳನ್ನು ಬೆಳೆಸಿಕೊಂಡು ಮತ್ತು ಸಂಸತ್ತಿನ ಅಭ್ಯಾಸಗಳು ಮತ್ತು ಕಾರ್ಯವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಇದು ಯುವಕರಲ್ಲಿ ನಾಯಕತ್ವದ ಗುಣಗಳನ್ನು ಉತ್ತೇಜಿಸುತ್ತದೆ ಮತ್ತು ಅವರ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಈ ಪ್ರಕ್ರಿಯೆಯಲ್ಲಿ. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ ಎಂದರು.

ಈ ಸಂದರ್ಭದಲ್ಲಿ ನೂತನ ಕಾಲೇಜು ಸಂಸತ್ತ ಮಂಡಳಿಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಽ ಬೋಽಸಿದರು. ಪ್ರಧಾನ ಕಾರ್ಯದರ್ಶಿಗಳಾಗಿ ಸೃಷ್ಠಿ ತೋಟದ, ಪೈಜಾನ ನಾಲಬಂದ. ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರಔಜಿತಾ ನವಲಿ, ಭಾಗ್ಯ ಗಂಗಶೆಟ್ಟಿ. ಕ್ರಿಡಾ ಕಾರ್ಯದರ್ಶಿಗಳಾಗಿ ಕಾರ್ತಿಕ ವಸöದ , ತೃಪ್ತಿ ಬೋಡಕೆ, ಸಾಹಿತ್ಯ ಪುರವಣಿ ಕಾರ್ಯದರ್ಶಿಗಳಾಗಿ ಅಂಬಿಕಾ ಅವಟೆ, ಸರ್ವಮಂಗಳಾ ಎರವಿನತಲಿಮಠ, ತರಗತಿಗಳ ಪ್ರತಿನಿಧಿಗಳಾಗಿ ಪೂರ್ವಿ ಹಿರೇಮಠ. ಸಂಜಯ ಸಾವಂತ, ರಿಶಿಕೇಶ, ಶ್ರೀಮಂತ ಸಜ್ಜನ ಆಯ್ಕೆಯಾದರು.

ಪ್ರಾಧ್ಯಾಪಕ ಡಾ.ರವಿ.ಕೋಟೆಣ್ಣವರ, ಉಪನ್ಯಾಸಕ ಡಾ ವಿನೋದ.ಕೆ ಉಪಸ್ಥಿತರಿದ್ದರು. ಶ್ವೇತಾ ಸಜ್ಜನ ನಿರೂಪಿಸಿದರು. ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಪಾಟೀಲ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ.ಶಮಶಾದ ಅಂಕಲಗಿ ವಂದಿಸಿದರು.