ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಸಮೀಪದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಬಳಿ ಬುಧವಾರ ಸಂಜೆ ನಾಯಿಯೊಂದು ನವಜಾತ ಶಿಶುವಿನ ಅರ್ಧ ದೇಹ ಕಚ್ಚಿಕೊಂಡು ಓಡಾಡಿದ ಘಟನೆ ನಡೆದಿದೆ.
ನಾಯಿಗಳು ಶಿಶುವಿನ ಅರ್ಧ ದೇಹ ಹಾಗೂ ಬಲಗೈ ಕಚ್ಚಿ ತಿಂದಿವೆ. ಇನ್ನರ್ಧ ದೇಹ ಕಚ್ಚಿಕೊಂಡಿದ್ದ ನಾಯಿಯನ್ನು ನೋಡಿ ಸಂಸ್ಥೆ ಕಾವಲುಗಾರ ಓಡಿಸಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬಡಾವಣೆ ಪೊಲೀಸರು, ಎಸ್‌ಒಸಿಒ ಅಧಿಕಾರಿಗಳ ತಂಡ ಮತ್ತು ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಎರಡು-ಮೂರು ದಿನಗಳ ಹಿಂದೆ ಜನಿಸಿರಬಹುದಾದ ಈ ಶಿಶುವನ್ನು ಯಾರೋ ಅದು ಮೃತಪಟ್ಟ ಅಥವಾ ಜೀವಂತವಾಗಿದ್ದಾಗಲೇ ಸಮೀಪದಲ್ಲಿ ಬಿಟ್ಟು ಹೋಗಿರಬಹುದೆಂದು ಶಂಕಿಸಲಾಗಿದೆ.
ಗುರುವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶಿಶು ಹೆಣ್ಣು ಅಥವಾ ಗಂಡು ಎಂದು ತಿಳಿಯಲು ಡಿಎನ್‌ಎ ಟೆಸ್ಟ್‌ಗೆ ಕಳಿಸಲಾಗಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬಡಾವಣೆ ಠಾಣೆ ಪಿಐ ನಯೀಂ ಅಹಮ್ ತಿಳಿಸಿದರು. ಡಿವೈಎಸ್ ಪಿ.ಕೆ. ದಿನಕರ್ ಸ್ಥಳಕ್ಕೆ ಭೇಟಿ ನೀಡಿದ್ದರು.