ಕಮಲನಗರದ ತಹಸಿಲ್ ಕಚೇರಿ ಆವರಣದಲ್ಲಿ ಬುಧವಾರ ತಾಲೂಕು ಆಡಳಿತದ ವತಿಯಿಂದ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ, ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಮಾಣಿಕರಾವ ಪಾಟೀಲ್, ಎಡಿ ಹಣಮಂತರಾಯ, ಉಪನ್ಯಾಸಕ ಪ್ರದೀಪ ಬಿರಾದಾರ, ಸಚಿನ್ ಜಾಧವ. ಪಿಡಿಒ ರಾಜಕುಮಾರ ತಂಬಾಕೆ ಇತರರಿದ್ದರು. 
ಜಿಲ್ಲೆ

ಶಿವಾಜಿ ಶೌರ್ಯ-ಸಾಧನೆ ಚೈತನ್ಯದಾಯಕ

ಕಮಲನಗರ: ಛತ್ರಪತಿ ಶಿವಾಜಿ ಮಹಾರಾಜರು ಹಿಂದು ಧರ್ಮ ರಕ್ಷಣೆಗೆ ಮೊಘಲರ ವಿರುದ್ಧ ಯುದ್ಧ ಮಾಡಿ,  ಭಾರತೀಯ ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆಯನ್ನು ರಕ್ಷಣೆ ಮಾಡಿದ ಅವರ ಶೌರ್ಯ, ಸಾಧನೆ ಇಂದಿನ ಪೀಳಿಗೆಗೆ ಚೈತನ್ಯದಾಯಕವಾಗಿದೆ ಎಂದು ಮಹಾರಾಷ್ಟ್ರದ ಉದಗಿರಿಯ ಉಪನ್ಯಾಸಕ ಪ್ರದೀಪ ಬಿರಾದಾರ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಶಿವಾಜಿ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಯುದ್ಧ ಎಂಬುದು ಒಂದು ಕಲೆಯನ್ನಾಗಿ ದೇಶದ ಸೈನಿಕರಿಗೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಶಿವಾಜಿ. ತನ್ನ ಬಾಲ್ಯದಿಂದಲೇ, ಯುದ್ಧ ಕೌಶಲ, ಶೌರ್ಯ, ಪರಾಕ್ರಮ ಕಲೆಯನ್ನು ಕಂಡು ವಿರೋಧಿಗಳು ನಡುಗುವಂತೆ ಮಾಡಿದ್ದರು. ಯುವ ಜನತೆ ಶಿವಾಜಿಯಂತೆ ದೇಶಾಭಿಮಾನ ಬೆಳೆಸಿಕೊಂಡು ದೇಶ ಕಟ್ಟುವ ಕಲಿಗಳಾಗಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಎಸ್.ಎನ್.ಶಿವಣಕರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಮಾಣಿಕರಾವ ಪಾಟೀಲ್, ಎಡಿ ಹಣಮಂತರಾಯ ಕೌಟಗೆ, ಮಾಧವರಾವ ಚಾಂಗೂಣೆ, ರಂಗರಾವ ಜಾಧವ್, ಪ್ರವೀಣ ಕದಮ್, ರಮೇಶ ಹುಣಸನಾಳೆ, ಸಂತೋಷ ಸೊಲ್ಲಾಪುರೆ, ಶಾಂತಕುಮಾರ ಬಿರಾದಾರ, ಮಹಾದೇವ ಲಾಂಚಕರ್, ಶ್ರೀರಂಗ ಪರಿಹಾರ, ಬಾಲಾಜಿ ತೇಲಂಗ್, ಮನೋಹರ ಜಾಧವ್ ಇತರರಿದ್ದರು. ಆಕಾಶ ಜಾಧವ ಸ್ವಾಗತಿಸಿದರು. ಸಚಿನ್ ಜಾಧವ ವಂದಿಸಿದರು. ರಾಜಕುಮಾರ ತಂಬಾಕೆ ನಿರೂಪಣೆ ಮಾಡಿದರು.

ಬೈಕ್ ರ‍್ಯಾಲಿ: ಪಟ್ಟಣದ ಶಿವಾಜಿ ಮಹಾರಾಜರ ವೃತ್ತದಿಂದ ಆರಂಭವಾದ ಬೈಕ್ ರ‍್ಯಾಲಿಯು ವಲ್ಲಭಭಾಯಿ ಪಟೇಲ್ ವೃತ್ತ, ಪ್ರವಾಸಿ ಮಂದಿರ, ಬಸವೇಶ್ವರ ವೃತ್ತ, ಅಲ್ಲಂಪ್ರಭು ವೃತ್ತ, ಡಾ.ಚನ್ನಬಸವ ಪಟ್ಟದ್ದೇವರ ವೃತ್ತ ಮೂಲಕ ಸಾಗಿತು. ರ‍್ಯಾಲಿಯುದ್ದಕ್ಕೂ ಯುವಕರು ಶಿವಾಜಿ ಮಹಾರಾಜ ಕೀ ಜೈ ಎಂಬ ಘೋಷಣೆ ಕೂಗಿದರು.