ಕುಂದಗೋಳ: ಹಿಂದುತ್ವದ ಉಳಿವಿಗಾಗಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಹೋರಾಡಿದ ಕಾರ್ಯ ಇತಿಹಾಸದಲ್ಲಿ ಶ್ಲಾಘನೀಯವಾಗಿದೆ. ನಾವೆಲ್ಲರೂ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮರಾಠ ಸಮಾಜದ ತಾಲೂಕಾಧ್ಯಕ್ಷ ವಿಠ್ಠಲ ಚವ್ಹಾಣ ಹೇಳಿದರು.
ಪಟ್ಟಣದ ಶಿವಾಜಿನಗರ (ಕಿಲ್ಲಾ)ದ ಶಂಭುಲಿಂಗೇಶ್ವರ ಆವರಣದಲ್ಲಿ ಮರಾಠ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿವಾಜಿ ಮೂರ್ತಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಿರಿಯ ವಕೀಲ ಸಿ.ಎಂ. ಕಾಳೆಯವರು, ಶಿವಾಜಿ ಮಹಾರಾಜರ ಜೀವನದ ಬಗ್ಗೆ ಮಾತನಾಡಿದರು.
ಪ್ರಕಾಶ ಟಿಕ್ಕಪ್ಪನವರ, ಮಹದೇವಪ್ಪ ಖಂಡೋಜಿ, ವಸಂತ ಶಿಂಧೆ, ಮಹದೇವಪ್ಪ ಬಡ್ನಿ, ಶ್ರೀಕಾಂತ ಕಲಾಲ, ರಾಜಣ್ಣ ಶಿವಳ್ಳಿ, ದತ್ತಣ್ಣ ಪವಾರ, ರಾಮು ಶಿಂಧೆ, ಪಾಂಡು ಕುಂಕೂರ, ಪವನ ಸರ್ವದೆ, ಮಾರುತಿ ಏಸುಗಡೆ, ಮಂಜುನಾಥ ಗಾಯಕವಾಡ, ಹರೀಶ ಗಾಯಕವಾಡ, ಶೇಖಪ್ಪ ಹೈಬತ್ತಿ, ಖಂಡೋಬಾ ಸಂತಬಾನವರ, ಇತರರಿದ್ದರು.