ಶಿವಾಜಿ ಪುತ್ಥಳಿ ಸ್ಥಾಪನೆ ವಿಚಾರವಾಗಿ ಬಾಗಲಕೋಟೆ ನಗರದ ಜಿ.ಪಂ ಸಭಾಭವನ ಆವರಣದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ನಡುವೆ ವಾಗ್ದಾದ ಉಂಟಾಯಿತು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಇದ್ದರು.
ಬಾಗಲಕೋಟೆ: ನವನಗರದ ಅನುಷ್ಕಾ ಪೆಟ್ರೋಲ್ ಬಂಕ ಸಮೀಪ ಈಗಾಗಲೇ ಗುರುತಿಸಿರುವ ಜಾಗದಲ್ಲಿ ಛತ್ರಪತಿ ಶಿವಾಜಿ ಹಾಗೂ ಎಪಿಎಂಸಿ ವೃತ್ತದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ,ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಶಿವಾಜಿ ಅಭಿಮಾನಿಗಳು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸಭೆ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಫೆಬ್ರವರಿ 19 ರಂದು ಶಿವಾಜಿ ಜಯಂತಿ ಇರುತ್ತದೆ. ಆ ದಿನವೇ ನಿಮ್ಮ ( ಜಿಲ್ಲಾ ಉಸ್ತುವಾರಿ ಸಚಿವ) ಅಮೃತ ಹಸ್ತದಿಂದ ಪ್ರತಿಷ್ಟಾಪನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪೂರ ಅವರಿಗೆ ಒತ್ತಾಯಿಸಿದರು. ಎಲ್ಲಾ ದಾಖಲೆ ಸರಿ ಇದ್ದರೂ,ಪ್ರತಿಷ್ಟಾಪನೆ ಗೆ ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಪಿ ಅಮರನಾಥ ರೆಡ್ಡಿ ಮಾತನಾಡಿ,ಹಿಂದೆ ನೀವು ಕೇಳಿರುವ ಅನುಮತಿಗೆ ಜಿಲ್ಲಾಡಳಿತ ರದ್ದು ಮಾಡಿದೆ.ಈಗ ಮತ್ತೆ ನೂತನವಾಗಿ ಎಲ್ಲಾ ದಾಖಲೆ ನೀಡಿ,ಕಾನೂನು ಪ್ರಕಾರ ಶಿವಾಜಿ ಪುತ್ಥಳಿ ಸ್ಥಾಪನೆಗೆ ಅನುಮತಿ ತೆಗೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು, ಸಚಿವರು ಸಹ ಅನುಮತಿ ಪಡೆದುಕೊಂಡು ಶಿವಾಜಿ ಪುತ್ಥಳಿ ಸ್ಥಾಪನೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಆಗ ನಾರಾಯಣಸಾ ಭಾಂಡೆಗೆ, ಸಚಿವರಿಗೆ ನೀವೇ ನಿಂತು ಪ್ರತಿಷ್ಟಾಪನೆ ಮಾಡುವುದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂಸದರಾದ ಪಿ ಸಿ ಗದ್ದಿಗೌಡರ, ಅಶೋಕ ಲಿಂಬಾವಳಿ,ಸವಿತಾ ಲೆಂಕೆಣ್ಣವರ, ಶ್ರೀನಾಥ ಸಜ್ಜನ್, ಸುರೇಶ ಮಜ್ಜಗಿ, ಕುಮಾರಸ್ವಾಮಿ ಹಿರೇಮಠ, ಸೇರಿದಂತೆ, ನಗರ ಸಭೆಯ ಸದಸ್ಯರು, ಉಪಾಧ್ಯಕ್ಷರು,ಸಭಾಪತಿ ಹಾಗೂ ಸದಸ್ಯರು,ಮರಾಠಾ ಸಮಾಜದ ಮುಖಂಡರು ಭಾಗವಹಿಸಿದ್ದರು.