ಜಿಲ್ಲೆ

ಶಿವಾಜಿ ಆದರ್ಶ ಯುವಕರು ಮೈಗೊಡಿಸಿಕೊಳ್ಳಲಿ

ಗುಂಡೇವಾಡಿ: ಛತ್ರಪತಿ ಶಿವಾಜಿ, ಜಗಜ್ಯೋತಿ ಬಸವೇಶ್ವರ, ಡಾ.ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣನಂತಹ ಮಹಾತ್ಮಾರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಕೃಷ್ಣ ಸಕ್ಕರೆ ಕಾರ್ಖಾನೆ ಸದಸ್ಯ ಗುಳಪ್ಪ ಜತ್ತಿ ಹೇಳಿದರು.

ಗ್ರಾಮದಲ್ಲಿ ಶಿವಾಜಿ ಜಯಂತಿ ನಿಮಿತ್ತ ಗುರುವಾರ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಮುಖಂಡರಾದ ಬಸವರಾಜ ಅಂಗಡಿ, ರವಿ ಕಾಂಬಳೆ, ಶಿವಾನಂದ ಗೋಲಭಾಂವಿ, ಅಭಾ ಚವ್ಹಾಣ, ಸಂಭಾ ವೀರ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಚಂದ್ರಕಾಂತ ಗೊಂಧಳಿ, ಸಿದ್ಧಾರೂಢ ಗುಂಜಿಗಾಂವಿ, ಮಹಾಂತಯ್ಯ ಹಿರೇಮಠ, ಸಚಿನ ವೀರ, ಸಂಜು ವೀರ, ಪ್ರಲ್ಹಾದ ವೀರ, ಸುರೇಶ ಕದಂ, ಅನಿಲ ಗೊಂಧಳಿ, ಸಿದರಾಯ ವೀರ, ದೊಂಡಿಭಾ ಜಾಧವ, ಅನಿಲ ಲೋಹಾರ, ಶಿವಾನಂದ ಕಾಂಬಳೆ, ಬಸವರಾಜ ಕಾಂಬಳೆ, ಮಹೇಶ ಪಾಟೀಲ, ಸಚಿನ ಗೋಲಭಾಂವಿ ಇತರರು ಇದ್ದರು.