ಬೆಳಗಾವಿ ಶಿವಾಜಿ ಮಹಾರಾಜ ಉದ್ಯಾನದ ಬಳಿ ನಿರ್ಮಾಣ ಮಾಡಿರುವ ‘ಶಿವಸೃಷ್ಟಿ’ಯನ್ನು ಶಾಸಕ ಅಭಯ ಪಾಟೀಲ ಅವರು ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ಮತ್ತೊಮ್ಮೆ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀರಾಮಸೇನಾ ಹಿಂದೂಸ್ತಾನ ಸಂಘಟನೆಯಿಂದ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಲಾಯಿತು. ರಮಾಕಾಂತ ಕೊಂಡೂಸ್ಕರ್, ಸಾಗರ ಪಾಟೀಲ, ನರೇಶ ನಿಲಜಕರ, ಬಲವಂತ ಶಿಂಧೋಳ್ಕರ ಇತರರಿದ್ದರು. 
ಜಿಲ್ಲೆ

ಶಿವಸೃಷ್ಟಿ ಜನರ ವೀಕ್ಷಣೆಗೆ ಮುಕ್ತವಾಗಲಿ

ಬೆಳಗಾವಿ: ಶಿವಾಜಿ ಮಹಾರಾಜ ಉದ್ಯಾನ ಬಳಿ ನಿರ್ಮಾಣ ಮಾಡಿರುವ ‘ಶಿವಸೃಷ್ಟಿ’ಯನ್ನು ಶಾಸಕ ಅಭಯ ಪಾಟೀಲ ಅವರು ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಾಗಿ ಮತ್ತೊಮ್ಮೆ ಉದ್ಘಾಟನೆ ಮಾಡುವುದಕ್ಕೆ ಯೋಜಿಸಿದ್ದಾರೆ. 2017ರಲ್ಲೇ ಉದ್ಘಾಟನೆಯಾದರೂ ಜನರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿಲ್ಲ.

ಶೀಘ್ರ ಶಿವಸೃಷ್ಟಿಯನ್ನು ಜನರ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಸೋಮವಾರ ಶ್ರೀರಾಮಸೇನಾ ಹಿಂದೂಸ್ತಾನ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ ನೇತೃತ್ವದಲ್ಲಿ ಜಿಲ್ಲಾಕಾರಿಗೆ ಮನವಿ ಸಲ್ಲಿಸಲಾಯಿತು.

ಮಹಾನಗರ ಪಾಲಿಕೆ ಮತ್ತು ಬೆಳಗಾವಿ ನಗರಾಭಿವೃದ್ಧಿ ಪ್ರಾಕಾರದ ಅನುದಾನದಡಿ ಶಿವಾಜಿ ಮಹಾರಾಜರ ಶಿವಸೃಷ್ಟಿ ನಿರ್ಮಾಣ ಮಾಡಲಾಗಿದೆ. 2017ರಲ್ಲಿ ಉದ್ಘಾಟನೆ ಮಾಡಲಾಗಿದೆ. ಆದರೆ, ಈವರೆಗೂ ಅದನ್ನು ಜನರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿಲ್ಲ. ದಕ್ಷಿಣ ಶಾಸಕ ಅಭಯ ಪಾಟೀಲ ಅವರು ತಮ್ಮ ಸ್ವಾರ್ಥಕ್ಕಾಗಿ ಈಗ ಮತ್ತೆ ಉದ್ಘಾಟನೆ ಮಾಡುತ್ತಿದ್ದಾರೆ. ಔರಂಗಜೇಬನಿಗೆ ಶಿವಾಜಿ ಮಹಾರಾಜರನ್ನು ಬಂಸಲು ಆಗಿಲ್ಲ. ಆದರೆ, ಹಿಂದುತ್ವದ ಬಗ್ಗೆ ಹೇಳಿ ಹಿಂದು ಜನರೇ ಹಲವು ವರ್ಷಗಳಿಂದ ಶಿವಾಜಿ ಮಹಾರಾಜರ ಮೂರ್ತಿಯನ್ನು ಬಂಸಿಟ್ಟಿದ್ದು. ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಸಂಘಟನೆ ಪದಾಕಾರಿಗಳು ಕಿಡಿಕಾರಿದರು. ಸಾಗರ ಪಾಟೀಲ, ನರೇಶ ನಿಲಜಕರ, ಬಲವಂತ ಶಿಂಧೋಳ್ಕರ ಇತರರಿದ್ದರು.