ಜಿಲ್ಲೆ

ಶಿವಲಿಂಗೇಶ್ವರ ರಥೋತ್ಸವ ಏ.23ರಂದು

ಕಲಬುರಗಿ: ಹಿರೇಸಾವಳಗಿ ಗ್ರಾಮದಲ್ಲಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆ ನಿಮಿತ್ತ ಶ್ರೀ ಶಿವಲಿಂಗೇಶ್ವರ ರಥೋತ್ಸವ ಏ.೨೩ರಂದು ರಾತ್ರಿ೮ಕ್ಕೆ ಜರುಗಲಿದೆ ಎಂದು ಗ್ರಾಪಂ ಸದಸ್ಯ ರಮೇಶ ಕನಗೊಂಡ ತಿಳಿಸಿದರು. ಮಠದ ಪೀಠಾಧಿಪತಿ ಶ್ರೀ ಗುರುನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಜಾತ್ರೋತ್ಸವ ಆರಂಭವಾಗಿದೆ. ಏ.೨೨ರಂದು ಉಚ್ಚಾಯಿ ಉತ್ಸವ ಜರುಗಲಿದೆ. ಏ.೨೩ರಂದು ಹನುಮಾನ ಜಯಂತಿ ಹಾಗೂ ದವನದ ಹುಣ್ಣಿಮೆ ಹಿನ್ನೆಲೆ ರಾತ್ರಿ ೮ಕ್ಕೆ ಶ್ರೀ ಗುರುನಾಥ ಸ್ವಾಮೀಜಿ ಪಲ್ಲಕ್ಕಿಯಲ್ಲಿ ಆರೂಢರಾಗಿ ರಥದ ಸ್ಥಳಕ್ಕೆ ಬಂದು ಅಮೃತ ಹಸ್ತದಿಂದ ರಥಕ್ಕೆ ಚಾಲನೆ ನೀಡಲಿz್ದÁರೆ ಎಂದರು. ಏ.೨೪ರಂದು ಮದ್ದು ಸುಡುವುದು, ಏ.೨೫ರಂದು ಬೆಳಗ್ಗೆ ೧೧ಕ್ಕೆ ಬಿದಾಯಿ ಹಾಗೂ ಸುಪ್ರಸಿದ್ದ ಕಲಾವಿದರಿಂದ ಭಜನೆ, ವಾದನ, ಗೀಗಿ ಪದಗಳು ಜರುಗಲಿದೆ ಎಂದರು. ಪ್ರಮುಖರಾದ ಯಮನಯ್ಯ ಗುತ್ತೇದಾರ, ಸೂರ್ಯಕಾಂತ ಸಾವಳಗಿ, ಮಲ್ಲಿಕಾರ್ಜುನ ಸಾವಳಗಿ, ಯ¯್ಲÁಲಿಂಗ, ಉಸ್ಮಾನ್ ಲದಾಫ್ ಇದ್ದರು.