ಜಿಲ್ಲೆ

ಶಿವಲಿಂಗ ಹೇಡೆಗೆ ಪ್ರಶಸ್ತಿ

ಔರಾದ್: ಶ್ರೀ ನಾನಕ್ ಝೀರಾ ಸಾಹಿಬ್ ಫೌಂಡೇಷನ್ ಟ್ರಸ್ಟ್ ಸ್ಥಾಪಿಸಿರುವ `ಕಲ್ಯಾಣ ಕರ್ನಾಟಕ ಟೀಚರ್ಸ್ ಎಜ್ಯುಕೇಷನ್ ಐಕಾನ್ ಅವಾರ್ಡ್- ೨೦೨೩'ಗೆ ಸಂತಪುರ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಶಿವಲಿಂಗ ಹೇಡೆ ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಬಲಬೀರ್ ಸಿಂಗ್, ಸಂಯೋಜಕಿ ಜ್ಯೋತಿ ಐನಾಪುರ ತಿಳಿಸಿದ್ದಾರೆ. ಬೀದರ್‌ನ ಝೀರಾ ಕನ್ವೆನ್ಶನ್ ಹಾಲ್‌ನಲ್ಲಿ ಮಂಗಳವಾರ ಪ್ರಶಸ್ತಿ ಪ್ರದಾನ ನಡೆಯಲಿದೆ.