ಎನ್.ಆರ್.ಪುರ ಕಟ್ಟಿನಮನೆಯಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಭಕ್ತರನ್ನು ಬೀಳ್ಕೊಡಲಾಯಿತು. ತೀರ್ಥರಾಜ್, ಕೃಷ್ಣಮೂರ್ತಿ, ಶಿವಕುಮಾರ್, ಸಂತೋಷ್, ವಿಜಯಕುಮಾರ್, ಶಂಕರನಾರಾಯಣ ಭಟ್, ಮಂಜುಳಾ ಇತರರಿದ್ದರು. 
ಜಿಲ್ಲೆ

ಶಿವರಾತ್ರಿ ಆಚರಿಸಿದರೆ ಪುಣ್ಯಫಲ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಶಿವರಾತ್ರಿ ಆಚರಣೆಯಿಂದ ಪಾಪಗಳೆಲ್ಲ ಕಳೆದು ಪುಣ್ಯಪ್ರಾಪ್ತವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಎಚ್.ಕೈಮರ ವಲಯ ಮೇಲ್ವೀಚಾರಕ ತೀರ್ಥರಾಜ್ ತಿಳಿಸಿದರು.

ಕಾನೂರು, ಕೆರೆಮನೆ ಭಾಗದಿಂದ ಶಿವರಾತ್ರಿ ಪ್ರಯುಕ್ತ ಸತತ 18ನೇ ವಷರ್ ಧರ್ಮಸ್ಥಳ ತೀರ್ಥಯಾತ್ರೆಗೆ ಹೊರಟ 50ಕ್ಕೂ ಹೆಚ್ಚು ಗ್ರಾಮಸ್ಥರನ್ನು ಕಟ್ಟಿನಮನೆ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಿಸಿ ಗ್ರಾಮಸ್ಥರು ಧರ್ಮಸ್ಥಳಕ್ಕೆ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಲಿಂಗ ಪುರಾಣದ ಪ್ರಕಾರ ಈಶ್ವರನನ್ನು ಮೊದಲ ಬಾರಿಗೆ ಲಿಂಗ ರೂಪಿಯಾಗಿ ದರ್ಶನ ನೀಡಿದ ದಿನ ಎನ್ನುವುದು ನಂಬಿಕೆ. ಆದ್ದರಿಂದ ಎಲ್ಲ ಪಾದಯಾತ್ರಿಗಳೂ ಶ್ರದ್ಧಾಭಕ್ತಿಯಿಂದ ಪಾದಯಾತ್ರೆಯಲ್ಲಿ ಭಾಗವಹಿಸಿ ಶಿವನ ಕೃಪೆಗೆ ಪಾತ್ರರಾಗಬೇಕು ಎಂದು ಶುಭ ಹಾರೈಸಿದರು.

ಪಾದಯಾತ್ರೆ ಸಮಿತಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಪ್ರತಿ ವರ್ಷದಂತೆ ದಾನಿಗಳು, ಸಂಘ ಸಂಸ್ಥೆಗಳ ನೆರವಿನಿಂದ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಶಿವಕುಮಾರ್, ಒಕ್ಕೂಟದ ಅಧ್ಯಕ್ಷ ಸಂತೋಷ್, ವಿಜಯಕುಮಾರ್, ಶಂಕರನಾರಾಯಣ ಭಟ್, ಮಂಜುಳಾ ಇದ್ದರು.