ಜಿಲ್ಲೆ

ಶಿವಯೋಗಿಗಳ ಮಠ ತಲುಪಿದ ಪಾದಯಾತ್ರೆ

ಯಾದಗಿರಿ : ಅಬ್ಬೆತುಮಕೂರಿನ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಮಹಾಸ್ವಾಮೀಜಿ ನೇತೃತ್ವದ ಪರಂಪರಾ ಪಾದಯಾತ್ರೆ ಮಂಗಳವಾರ ಸಂಜೆ ಹೆಡಗಿಮದ್ರಾ ಗ್ರಾಮದ ಶ್ರೀ ಶಾಂತ ಶಿವಯೋಗಿ ಮಠ ತಲುಪಿತು.

ಸೋಮವಾರ ಜೇವರ್ಗಿ ತಾಲೂಕಿನ ಗಂವ್ಹಾರದಿAದ ಶುರುವಾದ ಪಾದಯಾತ್ರೆ ಸನ್ನತಿಯ ಚಂದ್ರಲಾ ಪರಮೇಶ್ವರಿ ದೇವಸ್ಥಾನ ತಲುಪಿ ಯಾತ್ರಾರ್ಥಿಗಳು ವಾಸ್ತವ್ಯ ಮಾಡಿದರು. ಬೆಳಗ್ಗೆ ದೇವಿಗೆ ಶ್ರೀಗಳು ವಿಶೇಷ ಪೂಜೆ ನೆರವೇರಿಸಿ ಎರಡನೇ ದಿನದ ಪಾದಯಾತ್ರೆ ಪ್ರಾರಂಭಿಸಿದರು. ಕನಗಾನಹಳ್ಳಿ ಮಾರ್ಗವಾಗಿ ಉಳವಂಡಗೇರಾ ತಲುಪಿದಾಗ ಅಲ್ಲಿನ ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿದರು. ಬಳಿಕ ಪ್ರಸಾದ ಸ್ವೀಕರಿಸಿದ ಭಕ್ತರು ಬನ್ನೆಟ್ಟಿ ಗ್ರಾಮ ತಲುಪಿದರು. ನಂತರ ವಿಶ್ವಾರಾಧ್ಯರ ದರ್ಶನ ಕಟ್ಟೆಯಲ್ಲಿ ಶಿವಲಿಂಗಪ್ಪ ಸಾಹು ಕೂಡಿ Àರಹತಾಬಾದ್ ಮತ್ತು ಬಳಗ ಏರ್ಪಡಿಸಿದ್ದ ಪ್ರಸಾದವನ್ನು ಎಲ್ಲ ಭಕ್ತರೊಂದಿಗೆ ಶ್ರೀಗಳು ಸೇವಿಸಿದರು.

ಹಾಗೆಯೇ ಮುಂದೆ ಹೊರಟ ಪಾದಯಾತ್ರೆ ತಳಕ ತಲುಪಿತು. ಗ್ರಾಮದೇವತೆ ಹಾಗೂ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ಸ್ವಾಮಿಗಳು ಪೂಜೆ ಸಲ್ಲಿಸಿದರು. ಬಳಿಕ ಹೆಡಗಿಮದ್ರಾ ತಲುಪಿ ಮಲ್ಲರೆಡ್ಡಪ್ಪ ಸಾಹು ಅರಿಕೇರಿ ಮನೆಯಲ್ಲಿ ಪಾದಯಾತ್ರಿಗಳು Àಲಹಾರ, ಭೀಮರೆಡ್ಡಿ ಸಾಹು ಏರ್ಪಡಿಸಿದ್ದ ಪ್ರಸಾದ ಸ್ವೀಕರಿಸಿದರು. ಬಳಿಕ ಶ್ರೀ ಶಾಂತಶಿವಯೋಗಿ ಮಠ ತಲುಪಿದರು. ಈ ವೇಳೆ ವೈದ್ಯಕೀಯ ಶಿP್ಷÀಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಶ್ರೀ ಡಾ.ಗಂಗಾಧರ ಸ್ವಾಮೀಜಿಯವರಿಗೆ ಜನ್ಮದಿನದ ಶುಭ ಕೋರಿದರು. ಕೆಕೆಆರ್‌ಡಿಬಿ ನೂತನ ಅಧ್ಯP್ಷÀ ಡಾ.ಅಜಯಸಿಂಗ್, ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ಅಲ್ಲಮಪ್ರಭು ಪಾಟೀಲ್ ಇದ್ದರು.

ಮೂರನೇ ದಿನದ ಪಾದಯಾತ್ರೆ ಹೆಡಗಿಮದ್ರಾ ಮಠದಲ್ಲಿ ಅಮಾವಾಸ್ಯೆ ಪೂಜಾ ವಿಧಾನ ನೆರವೇರಿಸಿ ಹೋತಪೇಟೆಯ ಮಲರೆಡ್ಡಿಗೌಡ, ಶಹಾಪುರದ ಮರೆಪ್ಪ ಹಯ್ಯಾಳಕರ್ ಏರ್ಪಡಿಸುವ ಪ್ರಸಾದ ಸ್ವೀಕರಿಸಿ ಠಾಣಗುಂದಿ, ನಂತರ ಅಬ್ಬೆತುಮಕೂರಿನ ಪಾದಗಟ್ಟೆಗೆ ಯಾತ್ರೆ ತಲುಪಲಿದೆ ಎಂದು ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.