ಜಿಲ್ಲೆ

ಶಿವಯೋಗಿಗಳ ಮಠ ತಲುಪಿದ ಪಾದಯಾತ್ರೆ


ಯಾದಗಿರಿ: ಅಬ್ಬೆತುಮಕೂರಿನ ಪೀಠಾಪತಿ ಡಾ.ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪರಂಪರಾ ಪಾದಯಾತ್ರೆ ಮಂಗಳವಾರ ಸಂಜೆ ತಾಲೂಕಿನ ಹೆಡಗಿಮದ್ರಾ ಗ್ರಾಮದ ಶ್ರೀ ಶಾಂತ ಶಿವಯೋಗಿ ಮಠ ತಲುಪಿತು.


ಸೋಮವಾರ ಜೇವಗರ್ಿ ತಾಲೂಕಿನ ಗಂವ್ಹಾರದಿಂದ ಪ್ರಾರಂಭವಾದ ಪಾದಯಾತ್ರೆ ಸನ್ನತಿಯ ಚಂದ್ರಲಾ ಪರಮೇಶ್ವರಿ ದೇವಸ್ಥಾನ ತಲುಪಿ ಅಲ್ಲಿ ಯಾತ್ರಾಥರ್ಿಗಳು ವಾಸ್ತವ್ಯ ಮಾಡಿದರು. ಬೆಳಗ್ಗೆ ದೇವಿಗೆ ಶ್ರೀಗಳು ವಿಶೇಷ ಪೂಜೆಯನ್ನು ನೆರವೇರಿಸಿ ಎರಡನೇ ದಿನದ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಕನಗಾನಹಳ್ಳಿ ಮಾರ್ಗವಾಗಿ ಹೊರಟು ಊಳವಂಡಗೇರಾ ಗ್ರಾಮವನ್ನು ತಲುಪಿದಾಗ ಅಲ್ಲಿನ ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿದರು.

ಅಲ್ಲಿ ಏರ್ಪಡಿಸಿದ್ದ ಪ್ರಸಾದ ಸ್ವೀಕರಿಸಿದ ಭಕ್ತರು ಬನ್ನೆಟ್ಟಿ ಗ್ರಾಮ ತಲುಪಿತು. ನಂತರ ವಿಶ್ವಾರಾಧ್ಯರ ದರ್ಶನ ಕಟ್ಟೆಯಲ್ಲಿ ಶಿವಲಿಂಗಪ್ಪ ಸಾಹು ಕೂಡಿ ಫರಹತಾಬಾದ್ ಹಾಗೂ ಅವರ ಬಳಗದವರು ಏರ್ಪಡಿಸಿದ್ದ ಪ್ರಸಾದವನ್ನು ಎಲ್ಲ ಭಕ್ತರೊಂದಿಗೆ ಶ್ರೀಗಳು ಸೇವನೆ ಮಾಡಿದರು.

ಹಾಗೆ ಮುಂದೆ ಹೊರಟ ಪಾದಯಾತ್ರೆ ತಳಕ ಗ್ರಾಮವನ್ನುತಲುಪಿತು.ಅಲ್ಲಿ ಗ್ರಾಮದೇವತೆ ಹಾಗೂ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ಸ್ವಾಮಿಗಳು ಪೂಜೆ ನೆರವೇರಿಸಿದರು. ಬಳಿಕ ಹೆಡಗಿಮದ್ರಾ ಗ್ರಾಮ ತಲುಪಿ, ಮಲ್ಲರೆಡ್ಡಪ್ಪ ಸಾಹು ಅರಿಕೇರಿ ಅವರ ಮನೆಯಲ್ಲಿ ಪಾದಯಾತ್ರಿಗಳು ಫಲಹಾರ ಸ್ವೀಕರಿಸಿ ಹಾಗೆ ಮುಂದೆ ಸಾಗಿ ಭೀಮರೆಡ್ಡಿ ಸಾಹು ಏರ್ಪಡಿಸಿದ್ದ ಪ್ರಸಾದ ಸ್ವೀಕರಿಸಿದರು. ಶ್ರೀ ಶಾಂತಶಿವಯೋಗಿ ಮಠವನ್ನು ತಲುಪಿದರು. ಈ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಡಾ.ಗಂಗಾಧರ ಸ್ವಾಮಿಗಳ ಜನ್ಮದಿನದ ನಿಮಿತ್ತ ಶುಭ ಹಾರೈಸಿದರು. ಈ ವೇಳೆ ಕೆಕೆಆರ್ಡಿಬಿ ನೂತನ ಅಧ್ಯಕ್ಷ ಡಾ.ಅಜಯ ಸಿಂಗ್, ಶಾಸಕರಾದ ಚನ್ನಾರೆಡ್ಡಿ ಪಾಟೀಲ್, ಅಲ್ಲಮ ಪ್ರಭು ಪಾಟೀಲ್ ಇದ್ದರು.
ಮೂರನೇ ದಿನದ