ಯಾದಗಿರಿ: ಪ್ರತಿವರ್ಷ ಭೀಮಾ ನದಿಗೆ ನೆರೆ ಬಂದ ವೇಳೆ ಜಾಲವೃತಗೊಳ್ಳುತ್ತಿರುವ ವಡಿಗೇರಾ ತಾಲೂಕಿನ ಶಿವನೂರು ಗ್ರಾಮ ಸ್ಥಳಾಂತರಕ್ಕೆ ಮುಖ್ಯಮಂತ್ರಿಗಳೊಡನೆ ಚರ್ಚೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಭಾನುವಾರ ವಡಿಗೇರಾ ಮತ್ತು ಶಹಾಪುರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಧಿಕಾರಿಳ ಜತೆ ಚರ್ಚೆಸಿ ಮಾತನಾಡಿದ ಅವರು, ಶಿವನೂರು ಗ್ರಾಮದ ಜನರನ್ನು ಸಧ್ಯ ಬೆಂಡೆಬೆಂಬಳಿಯ ಮೊರಾಜರ್ಿ ಸಕರ್ಾರಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿದೆ. ಸಧ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಕೂಡಲೇ ಗ್ರಾಮ ಸ್ಥಳಾಂತರಕ್ಕೆ ಜನತೆ ಆಗ್ರಹಿಸಿದ್ದಾರೆ ಎಂದರು.
ಶಿವನೂರು ಗ್ರಾಮ ಸ್ಥಳಾಂತರ ಮಾಡುವ ಸಂಬಂಧ ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಕಾರಿ ಭೂಮಿ ಇಲ್ಲ. ಆದರೆ ಖಾಸಗಿ ಅವರು ಭೂಮಿ ನೀಡಲು ಮುಂದೆ ಬಂದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು. ಇನ್ನೂ ನೀರು ನುಗ್ಗಿದ ಮನೆಗಳಿಗೆ ತಲಾ 10 ಸಾವಿರ ಪರಿಹಾರ ತ್ವರಿತವಾಗಿ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕಳೆದ ದಿನಗಳಿಂದ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಯ ಪ್ರವಾಹದಿಂದ ಸಾಕಷ್ಟು ಪ್ರಮಾಣ ಹಾನಿಯಾಗಿದೆ. ನದಿ ಪಾತ್ರದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಕುಟುಂಬಗಳು ಸಂಕಷ್ಟದಲ್ಲಿದ್ದು, ರೈತರು ಬೆಳೆದ ಬೆಳೆಯು ಅಪಾರ ಪ್ರಮಾಣ ಹಾನಿಯಾಗಿದ್ದು, ಹಾನಿ ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ಸೂಚಿಸಿದರು.