ಔರಾದ್: ಮನುಷ್ಯನಿಗೆ ಜೀವನದಲ್ಲಿ ಶಾಂತಿ, ಸಂತೃಪ್ತಿ, ನೆಮ್ಮದಿ ದೊರಕಬೇಕಾದರೆ ಸತ್ಸಂಗ ಹಾಗೂ ಶಿವನಾಮ ಸ್ಮರಣೆಯಿಂದ ಮಾತ್ರ ಸಾಧ್ಯ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲೂಕಿನ ಠಾಣಾಕುಶನೂರ ಗ್ರಾಮದಲ್ಲಿ ಭವಾನಿ ಮಾತಾ ಮಂದಿರದ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ಹಮ್ಮಿಕೊಂಡ ಶಿವತತ್ವ ಚಿಂತನೆ ಉದ್ಘಾಟಿಸಿ ಮಾತನಾಡಿ, ಆಧುನಿಕ ಜೀವನದ ಜಂಜಾಟದಲ್ಲಿ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ. ಹೀಗಾಗಿ ಸತ್ಸಂಗದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಉತ್ತಮ ಚಿಂತನೆ ಕೇಳುವ ಮೂಲಕ ಆನಂದಮಯ ಜೀವನ ನಡೆಸಬೇಕು ಎಂದರು.
ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ, ಭವಾನಿ ಮಾತಾ ಮಂದಿರ ಟ್ರಸ್ಟ್ ಅಧ್ಯಕ ಧನರಾಜ ವಡಿಯಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ತಾಲೂಕಾಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಪ್ರಮುಖರಾದ ಸಂಜುಕುಮಾರ ಜುಮ್ಮಾ, ಕಾಶಿನಾಥ ಜೀರ್ಗೆ, ರಘುನಾಥ ರೊಟ್ಟೆ, ವಸಂತ ದೇಸಾಯಿ, ಜಗನ್ನಾಥ ಪಸರಗೆ, ಓಂಕಾರ ಸ್ವಾಮಿ, ಶಿವರಾಜ ಬೋಚರೆ, ಶಿವಶರಣಪ್ಪ ವಲ್ಲೇಪುರೆ, ಧನರಾಜ ಜೀರ್ಗೆ, ಮಲ್ಲಿಕಾರ್ಜುನ ಬಿರಾದಾರ, ಶಿವಲಿಂಗ ಪರಶೆಟ್ಟೆ ಇದ್ದರು. ಮಹೇಶ ವಡಿಯಾರ್ ಸ್ವಾಗತಿಸಿದರು. ಶಾಂತಕುಮಾರ ಬೋಚರೆ ನಿರೂಪಣೆ ಮಾಡಿದರು. ಬಾಲಾಜಿ ವಾಘಮಾರೆ ವಂದಿಸಿದರು.