ಕೊಳ್ಳೇಗಾಲ: ತಾಲೂಕಿನ ಶಿವನ ಸಮುದ್ರ ಸಮೂಹ ದೇವಾಲ ಯಗಳಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅನಾರೋಗ್ಯ ಹಿನ್ನಲೆ ಚಿಕಿತ್ಸೆಗಾಗಿ ನಟ ಶಿವರಾಜ್ ಕುಮಾರ್ ಡಿ. 18 ರಂದು ವಿದೇಶಕ್ಕೆ ತೆರಳುತ್ತಿದ್ದಾರೆ. ಆಗಾಗಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವಕುಮಾರ್ ದಂಪತಿಗಳು ಶಿವನಸಮುದ್ರ ಶ್ರೀ ಮದ್ಯರಂಗನಾಥ ಸ್ವಾಮಿ ದೇವಾಲಯ, ಶ್ರೀ ಸೋಮೇಶ್ವರ ದೇವಾಲಯ ಹಾಗೂ ಶಿಂಷಾ ಮಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾವೇರಿ ನದಿಗೆ ಬಾಗಿನ ಅರ್ಪಿ ಸಿದರು.