ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರದ ಸಮೂಹ ದೇವಾಲಯಗಳ ಹುಂಡಿ ಎಣಿಕೆಯಲ್ಲಿ 4 ತಿಂಗಳ ಅವಧಿಯಲ್ಲಿ ಬರೋಬ್ಬರಿ 19,07,105 ರೂ. ನಗದು ಸಂಗ್ರಹವಾಗಿದೆ.
ಉಪವಿಭಾಗಾಧಿಕಾರಿ ಮಹೇಶ್ ನೇತೃತ್ವದಲ್ಲಿ ಮಧ್ಯರಂಗನಾಥಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಸಮೂಹ ದೇವಾಲಯಗಳಾದ ಮಧ್ಯರಂಗನಾಥಸ್ವಾಮಿ ದೇವಾಲಯ, ಪ್ರಸನ್ನ ಮೀನಾಕ್ಷಿ ಹಾಗೂ ಸೋಮೇಶ್ವರ ದೇವಾಲಯ ಮತ್ತು ಆದಿಶಕ್ತಿ ಮಾರಮ್ಮ ದೇವಾಲಯಗಳ ಹುಂಡಿ ಎಣಿಕೆ ಗುರುವಾರ ನಡೆಯಿತು.
ನಗದು ಜತೆಗೆ 18.50 ಗ್ರಾಂ ಚಿನ್ನದ ಪದಾರ್ಥಗಳು, 20 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಸಮೂಹ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿ ಸುರೇಶ್, ಉಪತಹಸೀಲ್ದಾರ್ ವಿಜಯಕುಮಾರ್, ಕಸಬಾ ರಾಜಸ್ವ ನಿರೀಕ್ಷಕ ನಿರಂಜನ್, ಪಾಳ್ಯ ರಾಜಸ್ವ ನಿರೀಕ್ಷಕ ರಂಗಸ್ವಾಮಿ, ಗ್ರಾಮ ಆಡಳಿತಾಧಿಕಾರಿ ರಾಕೇಶ್, ಮಮತಾ, ಪ್ರದೀಪ್, ಅನಿತಾ, ಶಾಂತರಾಜು, ಮಹದೇವಸ್ವಾಮಿ, ಕುಮಾರ್, ಪ್ರಸಾದ್, ಗ್ರಾಮ ಸಹಾಯಕ ಸೀಗನಾಯಕ, ಕೊಟಕ್ ಮಹೀಂದ್ರಾ ಬ್ಯಾಂಕ್ ಸಿಬ್ಬಂದಿ, ದೇವಾಲಯದ ಅರ್ಚಕರಾದ ಶ್ರೀಧರ್, ಮಾಧವನ್, ಮಧುಸೂದನ್, ನಾಗರಾಜು ದೀಕ್ಷಿತ್ ಇತರರು ಇದ್ದರು.