ಜಿಲ್ಲೆ

ಶಿವಚಿದಂಬರೇಶ್ವರ ಮಠದಲ್ಲಿ ಪಲ್ಲಕ್ಕಿ ಉತ್ಸವ

ಮುರಗೋಡ: ಸ್ಥಳಿಯ ಶಿವಚಿದಂಬರೇಶ್ವರ ಮೂಲ ಮಹಾೇತ್ರ ಕೆಂಗೇರಿ ಮಠದಲ್ಲಿ ಶ್ರಾವಣ ಕೊನೆಯ ಸೋಮವಾರ ನಿಮಿತ್ತ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ಪೀಠಾಧಿಕಾರಿ ದಿವಾಕರ ದೀತ್​ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ವಾದ್ಯಮೇಳದೂಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಶಿವಚಿದಂಬರೇಶ್ವರ ಪಾದುಕೆ, ಭಾವಚಿತ್ರದ ಪಲ್ಲಕ್ಕಿ ಉತ್ಸವ ಶ್ರೀಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ಆರತಿ, ನೈವೇದ್ಯ ಅರ್ಪಿಸಿದರು. ವಿವಿಧ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ್ದ ಸಂತರು ವಿಶೇಷ ಭಜನಾ ಸೇವೆ ಸಲ್ಲಿಸಿದರು. ಮಠದಲ್ಲಿ ಅನ್ನಪ್ರಸಾದ, ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಚಿದಂಬರ ನಾಮಜಪ ಕಾರ್ಯಕ್ರಮ ಜರುಗಿದವು.

ದೇವರ ಸ್ಮರಣೆಯಿಂದ ಸಂತೃಪ್ತಿ: ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ದಿವಾಕರ ದೀತ್​ ಸ್ವಾಮೀಜಿ, ಶ್ರಾವಣ ಮಾಸದಲ್ಲಿ ದೇವರ ನಾಮಸ್ಮರಣೆಯಿಂದ ಮನಸ್ಸಿಗೆ ಸಂತೃಪ್ತಿ ಸಿಗುತ್ತದೆ ಎಂದರು. ಪಾಂಡುರಂಗ ದೀತ್​, ಮಥುರಾತಾಯಿ ಗುರುಮಾತೆ, ಯಮುನಾತಾಯಿ ಗುರುಮಾತೆ, ಮಹೇಶ ದೇಶಪಾಂಡೆ, ಪದ್ಮಾಕರ ಹಂಪಿಹೊಳಿ, ಚಿದಂಬರ ತೊರಗಲ್ಲ, ಹುಲ್ಲೆಪ್ಪ ರಗಟಿ, ರಮೇಶ ದೇಶಪಾಡೆ, ಪ್ರಶಾಂತ ಹಾವನೂರ, ರಾಜು ಕಲ್ಮಠ, ಮಲ್ಲಯ್ಯ ಮಾಸ್ತಮರ್ಡಿ, ಬಸವರಾಜ ಮರಮಣ್ಣವರ ಇತರರಿದ್ದರು.