ಬಾಗಲಕೋಟೆ: ಶುಕ್ಲಯಜುರ್ವೇದ ಸಂಘದಿಂದ ಹಮ್ಮಿಕೊಂಡಿರುವ ಸರಸ್ವತಿ ಸಾವಿತ್ರ‍್ಯಾಂಬಾ ಸಮೇತ ಚಿದಂಬರ ಮಹಸ್ವಾಮಿಗಳ ಮೂರ್ತಿ ಪ್ರತಿಷ್ಠಪನಾ ಕಾರ್ಯಕ್ರಮದ ಅಂಗವಾಗಿ ಭಾನುವಾರ ಸಂಜೆ ನವನಗರದ ಸೆಕ್ಟರ್ ೫೫ ರಲ್ಲಿ ಶಿವ ಚಿದಂಬರ ಮೂರ್ತಿ ಭವ್ಯ ಮೆರವಣಿಗೆ ಭಾನುವಾರ ಸಂಜೆ ಜರುಗಿತು.
ಲೋಕಾಪುರ ಜ್ಞಾನೇಶ್ವರಮಠದ ಬ್ರಹ್ಮಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಹನುಮಂತ ದೇವರ ದೇವಸ್ಥಾನದಿಂದ ಆರಂಭವಾದ ಮರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನ ತಲುಪಿತು. ವೇದ-ಘೋಷ, ವಾದ್ಯಗಳ ವೈಭವ ಮೇಳೈಸಿತು. ಶಿವ ಚಿದಂಬರ ಮಹರಾಜಕಿ ಜೈ ಅಂತ ಘೋಷಣೆಗಳು ಮೊಳಗಿದವು.
ಸೋಮವಾರ ಬೆಳಗ್ಗೆ ಮೂರ್ತಿಗಳ ಪ್ರತಿಷ್ಠಾಪನೆ, ಹೋಮ-ಹವನಗಳು ನಡೆಯಲಿವೆ. ಪಂಡಿತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಈ ಸಂದರ್ಭದಲ್ಲಿ ಶಂಕರ ಬೋಕರೆ, ಅರುಣ ದೇಸಾಯಿ, ನಾಗರಾಜ ಕುಲಕರ್ಣಿ, ಮಹೇಶ ಕುಲಕರ್ಣಿ, ಬಿ.ಬಿ.ಕುಲಕರ್ಣಿ, ರಾಜರಾಮ ಜೋಶಿ, ಪ್ರಮೋದ ಜೋಶಿ ನೇತೃತ್ವ ವಹಿಸಿದ್ದರು.