ಕಿನ್ನಿಗೋಳಿ: ಆಕಸ್ಮಿಕ ಬೆಂಕಿ ಬಿದ್ದಾಗ ಅದನ್ನು ನಂದಿಸುವ ಪ್ರಾಥಮಿಕ ಜ್ಞಾನ ನಮ್ಮಲ್ಲಿರಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿ ಮಹಮ್ಮದ್ ಕೆ. ಹೇಳಿದರು.
ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘ, ಫೋಟೋಗ್ರಾಪರ್ಸ್ ಅಸೋಸಿಯೇಶನ್ ಮೂಲ್ಕಿ ವಲಯ, ರೋಟರಿ ಕ್ಲಬ್ ಮೂಲ್ಲಿ, ಪ್ರೆಸ್ ಕ್ಲಬ್ ಮೂಲ್ಕಿ ಮತ್ತು ಅಗ್ನಿಶಾಮಕ ದಳ ಮಂಗಳೂರು ವತಿಯಿಂದ ಅಗ್ನಿ ಸುರಕ್ಷತೆ ಜಾಗೃತಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇರೆ ಬೇರೆ ರೀತಿಯ ಬೆಂಕಿ ಅವಘಡ ಆದಾಗ ಅದನ್ನು ಯಾವ ರೀತಿಯಲ್ಲಿ ನಂದಿಸಲಾಗುತ್ತದೆ ಎಂಬುದನ್ನು ಶಾಲಾ ಮೈದಾನದಲ್ಲಿ ಪ್ರಾಯೋಗಿಕವಾಗಿ ತಿಳಿಸಲಾಯಿತು.
ಅಧಿಕಾರಿಗಳಾದ ಸ್ಟಿಪನ್ ಡಿಸಿಲ್ವ, ಪ್ರಸನ್ನ, ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೀತಮ್, ಫೋಟೋಗ್ರಾಪರ್ಸ್ ಅಸೋಸಿಯೇಶನ್ ಮೂಲ್ಕಿ ವಲಯ ಅಧ್ಯಕ್ಷ ಪ್ರಕಾಶ್ ಸುವರ್ಣ, ಮೂಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನಿಶಾಂತ್ ಕಿಲೆಂಜೂರು, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಜಿತೇಂದ್ರ ವಿ.ರಾವ್ ಸ್ವಾಗತಿಸಿದರು. ಶಿಕ್ಷಕಿ ವನಿತಾ ನಿರೂಪಿಸಿದರು. ಶಿಕ್ಷಕಿ ಶ್ರೀಲತಾ ವಂದಿಸಿದರು.