ಮೈಸೂರು: ರೋಟರಿ ಮೈಸೂರು ಸೇರಿದಂತೆ ಇನ್ನಿತರ ರೋಟರಿ ಕ್ಲಬ್‌ಗಳು, ಜಿಎಸ್‌ಎಸ್ ಯೋಗ ಮತ್ತು ಬ್ಲಡ್ ಆನ್ ಕಾಲ್ ಕ್ಲಬ್ ಸಹಯೋಗದಲ್ಲಿ ಗುರುವಾರ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್‌ನಲ್ಲಿ 49ನೇ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 333 ಜನರು ರಕ್ತದಾನ ಮಾಡಿದರು.
ಇನ್ಫೋಸಿಸ್ ಮೈಸೂರು ಡೆವಲಪ್‌ಮೆಂಟ್ ಸೆಂಟರ್‌ನ ಉಪಾಧ್ಯಕ್ಷ ವಿನಾಯಕ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಾಫ್ಟ್‌ಟನ್‌ನ ಟ್ರಸ್ಟಿಗಳಾದ ಅನಿಲ್, ರಾಘವೇಂದ್ರ ಉಡುಪ, ಅವಿನಾಶ್ ಪುರಾಣಿಕ್, ಹಿರಿಯ ಭದ್ರತಾ ವ್ಯವಸ್ಥಾಪಕ ರಘು ಎಂ ದಾಸ್, ವೇದ ಬೆಳ್ಳಿಯಪ್ಪ, ಎಚ್‌ಆರ್‌ನ ಪ್ರೀತಿ ಕುಶಾಲಪ್ಪ, ಜಿಎಸ್‌ಎಸ್ ಯೋಗ ಕೇಂದ್ರ ಶ್ರೀಹರಿ, ಬ್ಲಡ್ ಆನ್ ಕಾಲ್ ಕ್ಲಬ್‌ನ ದೇವೇಂದ್ರ, ರೋಟರಿ ವಿವಿಧ ಶಾಖೆಯ ಚಂದ್ರಕಲಾ, ಸಮೀರ್ ಕಶ್ಯಪ್, ಕೆ.ಎನ್.ಮುರಳೀಧರ, ಎಂ.ಎಸ.ಹರೀಶ್, ಲಯನ್ಸ್ ಜೀವಧಾರದ ಗಿರೀಶ್ ಇತರರಿದ್ದರು