ಹಗರಿಬೊಮ್ಮನಹಳ್ಳಿ: ಮಕ್ಕಳ ಕೈಗೆ ಮೊಬೈಲ್ ಕೊಡದಿರಿ. ಮಕ್ಕಳು ಮೊಬೈಲ್ ಸದ್ಭಳಕೆಗಿಂತ ದುರ್ಬಳಕೆ ಮಾಡಿಕೊಳ್ಳುವಲ್ಲಿ ಆಸಕ್ತರಾಗಿರುತ್ತಾರೆ ಎಂದು ಹಿರಿಯ ಸಾಹಿತಿ ಹುರುಕಡ್ಲಿ ಶಿವಕುಮಾರ ಹೇಳಿದರು.
ತಂಬ್ರಹಳ್ಳಿ ಉರ್ದು ಶಾಲೆಯಲ್ಲಿ ಶನಿವಾರ ಮಕ್ಕಳಿಗಾಗಿ ಆಯೋಜಿಸಿದ್ದ ಬೇಸಿಗೆ ಉಚಿತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಬೇಸಿಗೆಯಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ಪಾಲಕರು ಹರಸಾಹಸ ಪಡುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಇಂತಹ ಬೇಸಿಗೆ ಶಿಬಿರ ಏರ್ಪಡಿಸಿರುವುದು ಮೂಲಕ ಮಕ್ಕಳಲ್ಲಿ ಕಲಿಕೆ ಆಸಕ್ತಿ, ಪ್ರೇರಣೆ ಮೂಡಿಸಲು ಸಹಕಾರಿಯಾಗಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಎಲ್.ರಾಮನಾಯ್ಕ, ಸಿ.ವೈ.ಮೋರನಾಳ್, ಬಿ.ರಾಮಣ್ಣ, ಬಾಗಳಿ ಪ್ರಕಾಶ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಖ್ಯಶಿಕ್ಷಕ ಎಲ್.ರಡ್ಡಿ ನಾಯ್ಕ, ಗ್ರಾಪಂ ಸದಸ್ಯ ಮೆಹಬೂಬ್ ಬಾಷಾ, ಶಿಕ್ಷಕ ದುರ್ಗಾದಾಸ್, ಪ್ರಮುಖರಾದ ನಿಕತ್, ಅಸ್ಮತ್, ಬಿ.ಕೊಟ್ರಮ್ಮ ಇತರರಿದ್ದರು.