ಜಿಲ್ಲೆ

ಶಿಥಿಲ ಶಾಲಾ ಕಟ್ಟಡಗಳ ದುರಸ್ತಿ ಮಾಡಿ: ಲೋಕಾಯುಕ್ತ ಡಿವೈಎಸ್​ಪಿ ಸಿ.ಆರ್​.ರವೀಶ್​ ಸೂಚನೆ

ತಿಪಟೂರು: ಕೇವಲ ಪರೀಾ ಸಮಯದಲ್ಲಿ ಮಕ್ಕಳ ಬಗ್ಗೆ ನಿಗಾ ವಹಿಸುವುದನ್ನು ಬಿಟ್ಟು, ಸರಿಯಾಗಿ ಕಾರ್ಯನಿರ್ವಹಿಸಿ ಶಿಕ್ಷಣ ಸಚಿವರಿಗೆ ಒಳ್ಳೆಯ ಹೆಸರು ತರುವಂತೆ ಲೋಕಾಯುಕ್ತ ಡಿವೈಎಸ್​ಪಿ ಸಿ.ಆರ್​. ರವೀಶ್​ ಶಿಕ್ಷಕರಿಗೆ ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತದಿಂದ ಶುಕ್ರವಾರ ಆಯೋಜನೆಗೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಸರಿ ಇದೆ ಎಂದು ವಾದಿಸಬೇಡಿ. ತಿಪಟೂರು ನಗರ ಸೇರಿ ತಾಲೂಕಿನ 100ಕ್ಕೂ ಹೆಚ್ಚು ಶಾಲೆಗಳು ಶೌಚಗೃಹದ ಕೊರತೆ, ನೀರಿನ ಸಮಸ್ಯೆಯಿಂದ ಮುಚ್ಚಿರುವುದನ್ನು ನಾವೇ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಳೆದ ವರ್ಷ ಮೂರು ಕೋಟಿ ರೂ. ಅನುದಾನ ಬಿಡುಗಡೆ ಆಗಿರುವುದಾಗಿ ಹೇಳುತ್ತಿದ್ದೀರಿ. ಆದಷ್ಟು ಬೇಗ ಕ್ರಿಯಾ ಯೋಜನೆ ತಯಾರಿಸಿ, ಶಿಥಿಲವಾಗಿರುವ ಶಾಲಾ ಗೋಡೆ, ಕಾಂಪೌಂಡ್​ ದುರಸ್ತಿಗೊಳಿಸುವ ಜತೆಗೆ ನೀರಿನ ವ್ಯವಸ್ಥೆ ಮತ್ತು ಶೌಚಗೃಹಗಳನ್ನು ವ್ಯವಸ್ಥೆ ಮಾಡಬೇಕು. ಇದು ಶಿಕ್ಷಣ ಸಚಿವರ ಜಿಲ್ಲೆಯಾಗಿದೆ. ಆದ್ದರಿಂದ, ಅಧಿಕಾರಿಗಳು ಉದಾಸೀನ ಮಾಡಿದರೆ ಸಚಿವರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ೇತ್ರ ಶಿಕ್ಷಣಾಧಿಕಾರಿ ಬಿ.ಜೆ. ಪ್ರಭುಸ್ವಾಮಿ ಅವರಿಗೆ ಲೋಕಾಯುಕ್ತ ಡಿವೈಎಸ್​ಪಿ ಎಚ್ಚರಿಕೆ ನೀಡಿದರು.

ಮಾಂಸದ ಅಂಗಡಿಗಳನ್ನು ತೆರವುಗೊಳಿಸಿ: ನಗರದ ಅಂಚೆ ಕಚೇರಿ ರಸ್ತೆಗೆ ಮಡಿವಂತರು ಕಾಲಿಟ್ಟರೆ ಸಾಕು, ಇದು ತಾಜಾ ಕೋಳಿ, ತಾಜಾ ಮಾಂಸ ಎಂದು ಕೈ ಬೀಸಿ ಕರೆಯುವ ಅಂಗಡಿಗಳು ಕಚೇರಿ ರಸ್ತೆಯ ಇಕ್ಕೆಲಗಳಲ್ಲಿ ಕಾಣಿಸುತ್ತವೆ. ಕಚೇರಿ ಸಿಬ್ಬಂದಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅಂಗಡಿಗಳನ್ನು ಸ್ಥಳಾಂತರಿಸಿಲ್ಲ. ಇದಕ್ಕೆ ನೀವೇ ಪರಿಹಾರ ಸೂಚಿಸಿ ಎಂದು ರಸ್ತೆಯ ನಿವಾಸಿ ರಾಮಣ್ಣ ಲೋಕಾಯುಕ್ತರಿಗೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ನಗರಸಭೆ ಕಚೇರಿ ವ್ಯವಸ್ಥಾಪಕ ವೆಂಕಟೇಶ್​, ಅಲ್ಲಿ ಕೇವಲ 10&15 ಅಂಗಡಿಗಳು ಮಾತ್ರ ಇವೆ. ಎಲ್ಲರೂ ನಗರಸಭೆಯಿಂದ ಪರವಾನಗಿ ಪಡೆದಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದರು. ಬಳಿಕ ಅದನ್ನು ಪರಿಶೀಲಿಸುವುದಾಗಿ ಸಮಜಾಯಿಷಿ ನೀಡಿದರು.

ಅಂಗನವಾಡಿ ಕೇಂದ್ರಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದೀರಿ?

ತಾಲೂಕಿನ 355 ಅಂಗನವಾಡಿ ಕೇಂದ್ರಗಳು, 11 ಸಾವಿರ ಮಕ್ಕಳು, 2,500 ಗರ್ಭಿಣಿ/ಬಾಣಂತಿಯರು ಸೇರಿ ಎಲ್ಲ ವ್ಯವಸ್ಥೆಯೂ ಅಚ್ಚುಕಟ್ಟಾಗಿದೆ ಎಂದು ಸರ್ಕಾರದ ಯೋಜನೆಗಳನ್ನು ಎಂದು ವಿವರಿಸಿದ ಸಿಡಿಪಿಒ ಪಿ. ಓಂಕಾರಪ್ಪ ಅವರ ಮಾತಿಗೆ ಬ್ರೇಕ್​ ಹಾಕಿದ ಲೋಕಾಯುಕ್ತ ಇನ್​ಸ್ಪೆಕ್ಟರ್​ ರಾಮಾರೆಡ್ಡಿ, ತಾಲೂಕಿನಲ್ಲಿ 15 ತೀರಾ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿದೆ ಎಂದು ಹೇಳುತ್ತೀರಿ. ತಿಂಗಳಲ್ಲಿ ಎಷ್ಟು ಸಾರಿ ಅಂಗನವಾಡಿ ಕೇಂದ್ರ ಹಾಗೂ ಮಕ್ಕಳ ಮನೆಗೆ ಭೇಟಿ ಕೊಟ್ಟು ವಿಚಾರಿಸಿದ್ದೀರಿ? ಅಪೌಷ್ಟಿಕತೆ ಕಡಿಮೆ ಮಾಡಲು ಯಾವ ಕ್ರಮ ಕೈಗೊಂಡಿದ್ದೀರಿ? ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕರೆದೊಯ್ಯುವ ಸಹಾಯಕರ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದಾಗ, ನಿರುತ್ತರರಾಗಿ ನಿಂತರು.

ಮತ್ತಿಹಳ್ಳಿ ಗ್ರಾಪಂನಲ್ಲಿ 2018&19ರಲ್ಲಿ 203 ಕಡೆ ಕಾಮಗಾರಿ ಮಾಡದೆ ಕುಡಿಯುವ ನೀರಿನ ಪೈಪ್​ಲೈನ್​ ಅಳವಡಿಸಲಾಗಿದೆ ಎಂದು ಬಿಲ್​ ಸೃಷ್ಟಿಸಲಾಗಿದೆ. ಕಾಮಗಾರಿ ಗುರುತಿಸಿಕೊಡಿ ಎಂದು ಪಿಡಿಒ ಅವರನ್ನು ಕೇಳಿದರೆ ಗುತ್ತಿಗೆದಾರರಿಂದ ಬೆದರಿಕೆ ಹಾಕಿಸಲಾಗುತ್ತಿದೆ ಎಂದು ಅಲ್ಲಿನ ಮಾಜಿ ಉಪಾಧ್ಯಕ್ಷ ಉದಯ್​ ಕುಮಾರ್​ ದೂರಿಗೆ ಸ್ಪಂದಿಸಿದ ಲೋಕಾಯುಕ್ತರು, ತಕ್ಷಣ ದೂರು ಕೊಡಿ, ಇಲಾಖೆ ವತಿಯಿಂದ ಸ್ವಪ್ರೇರಣೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.