ನಿಪ್ಪಾಣಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿವಿಧ ಟಕಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿದರು. ಪ್ರಾಚಾರ್ಯ ಅಕ್ಬರ್​ ಮುಲ್ಲಾ, ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ ಮತ್ತಿತರರು ಇದ್ದರು. 
ಜಿಲ್ಲೆ

ಶಿಣದೊಂದಿಗೆ ಸಂಸ್ಕಾರವೂ ಬೇಕು: ಶಾಸಕಿ ಶಶಿಕಲಾ ಜೊಲ್ಲೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ನಿಪ್ಪಾಣಿ: ಮನಸಿದ್ದರೆ ಮಾರ್ಗ ಎಂಬ ಮಾತಿನಂತೆ ವಿದ್ಯಾರ್ಥಿಗಳೆಲ್ಲರೂ ಸಂಸ್ಕಾರಯುತ ಶಿಣ ಪಡೆಯವುದು ಅವಶ್ಯ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ 2022&23ನೇ ಶೈಣಿಕ ಸಾಲಿನ ಸಾಂಸತಿಕ, ಕ್ರೀಡಾ, ಎನ್​.ಎಸ್​.ಎಸ್​. ಯುವ ರೆಡ್​ ಕ್ರಾಸ್​ ಹಾಗೂ ವಿವಿಧ ಟಕದ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಬಿ.ಎ. ಮತ್ತು ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಅಧ್ಯತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಮಯ ಪಾಲನೆ, ಶಿಸ್ತು, ಅಧ್ಯಯನ ಕಡೆ ಗಮನಕೊಡಬೇಕು ಎಂದು ಸಲಹೆ ನೀಡಿದರು.

ಶೆಣಿಕ ವರ್ಷದಲ್ಲಿ ಕಲಾ ಮತ್ತು ಕ್ರೀಡೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಪ್ರಾಚಾರ್ಯ ಅಕ್ಬರ್​ ಮುಲ್ಲಾ, ಪ್ರೊ.ಸಚಿನ ಮಗದುಮ, ಸಂಯೋಜಕ ಪ್ರೊ.ವಿಶ್ವನಾಥ ಕಟ್ಟಿ, ಡಾ.ನೇಮಿನಾಥ ತಪಕಿರೆ, ಡಾ.ಚಾರುದತ್ತ ಕಾಸಾರ, ವಿರೂಪಾ ಸೊಲಾಪುರೆ, ನಗರಸಭೆ ಮಾಜಿ ಅಧ್ಯ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ಪ್ರಣವ ಮಾನವಿ, ಸಂಜಯ ಸಾಂಗಾವಕರ ಇತರರು ಇದ್ದರು.