ಜಿಲ್ಲೆ

ಶಿಗ್ಗಾಂವಿಯಲ್ಲಿ ಸಿಎಂ ಜತೆ ನಡ್ಡಾ, ಸುದೀಪ್

ಶಿಗ್ಗಾಂವಿ (ಹಾವೇರಿ): ಭಾವೈಕ್ಯತೆಯ ನಾಡು ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಲು ಬಿಜೆಪಿ ಜೆ.ಪಿ.ನಡ್ಡಾ ಹಾಗೂ ನಟ ಕಿಚ್ಚ ಸುದೀಪ ಶಿಗ್ಗಾಂವಿಗೆ ಆಗಮಿಸಿದ್ದಾರೆ.

ಸಿಎಂ ನಿವಾಸಕ್ಕೆ ತೆರಳಿ ಸಿಎಂ ಜತೆಗೆ ಚರ್ಚಿಸುತ್ತಿದ್ದಾರೆ. ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜೆ.ಪಿ.ನಡ್ಡಾ ಬೃಹತ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ.

ಸುಡುವ ಬಿಸಿಲಿನಲ್ಲೂ ರೋಡ್ ಶೋಗೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು ಆಗಮಿಸಿ ಕಾಯುತ್ತಿದ್ದಾರೆ.

ಪಟ್ಟಣ ಪೂರ್ತಿ ಕೇಸರಿಮಯವಾಗಿದ್ದು, ಎಲ್ಲೆಲ್ಲೂ ಜನಸಾಗರ ಕಂಡು ಬರುತ್ತಿದೆ. ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ.