ಜಿಲ್ಲೆ

ಶಿಕ್ಷಣದಿಂದ ಸದೃಢ ರಾಷ್ಟ್ರ ನಿರ್ಮಾಣ

ಕಲಬುರಗಿ: ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಸದೃಢ, ಸಮೃದ್ಧ ರಾಷ್ಟç ನಿರ್ಮಾಣ ಸಾಧ್ಯ ಎಂದು ಕೆಎಸ್‌ಆರ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್ ಬಲಿರಾಮ ಚವ್ಹಾಣ್ ಹೇಳಿದರು.
ತಾಜ ಸುಲ್ತಾನಪುರದ ಕೆಎಸ್‌ಆರ್‌ಪಿ ಪ್ರೌಢ ಶಾಲೆಯಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದಿಂದ ಶನಿವಾರ ಹಮ್ಮಿಕೊಂಡ ನಮ್ಮ ನಡಿಗೆ, ಹಳ್ಳಿ ಕನ್ನಡ ಸರ್ಕಾರಿ ಶಾಲೆ ಕಡೆಗೆ ಸಂಕಲ್ಪದೊಂದಿಗೆ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ. ತೋಟದಲ್ಲಿ ಯಾವ ಬೆಳೆ ಬೆಳೆಯುತ್ತೇವೆ, ಅದರ ಪ್ರತಿಫಲ ನಾವು ಪಡೆಯುತ್ತೇವೆ. ವಿದ್ಯಾರ್ಥಿಗಳಲ್ಲಿ ಸಂಸ್ಕಾರದ ಬೀಜ ಬಿತ್ತಿ, ರಾಷ್ಟç ಕಟ್ಟುವ ಶಕ್ತಿಯಾಗಿಸಬೇಕು ಎಂದರು.
ಹಾಸ್ಯ ಸಾಹಿತಿ ಗುಂಡಣ್ಣ ಡಿಗ್ಗಿ ಮಾತನಾಡಿ, ತಾಯಿ ದೇವರಾಗಬಹುದು ಆದರೆ ದೇವರು ತಾಯಿಯಾಗಲಾರ. ತಾಯಿಗಿಂತ ದೊಡ್ಡ ದೇವರಿಲ್ಲ. ಹೆತ್ತ ತಾಯಿ ತಂದೆಯನ್ನು ಪೂಜಿಸಿದರೆ ಸ್ವರ್ಗಕ್ಕೆ ಹೋಗುವ ಬದಲು ಸ್ವರ್ಗವೇ ಭೂಮಿ ಮೇಲೆ ಸೃಷ್ಟಿಯಾಗುತ್ತದೆ ಎಂದರು.
ಸಾಧಕ ವಿದ್ಯಾರ್ಥಿಗಳಾದ ವಿಜಯಲಕ್ಷಿö್ಮÃ ವೀರಣ್ಣ, ಜಿಯಾ ಜೈನಬ್ ಅಪಸಿನ್, ಅರ್ಚನಾ ಹೊಳಕುಂದಿ, ಮೇಘನಾ ಹೂನ್ನಳ್ಳಿ, ಪ್ರe್ಞÁ ಡಾಂಗೆ, ಶ್ರವಣಕುಮಾರ ರಾಣಪ್ಪ ಅವರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪ ತಹಸೀಲ್ದಾರ್ ವೀರಯ್ಯ ಹೊಸಮಠ, ಶಿP್ಷÀಣ ಸಂಯೋಜಕ ಮಸ್ತಾನ್‌ಸಾಬ್, ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್, ಗ್ರಾಪಂ ಉಪಾಧ್ಯಕ್ಷ ಸಂಜೀವಕುಮಾರ ಜವರಕರ್, ಎಎಸ್‌ಐ ಪುಂಡಲಿಕ ಜಮಾದಾರ, ಡಾ.ಭೀಮಸಿಂಗ ರಾಠೋಡ, ವಕೀಲ ಹಣಮಂತರಾಯ ಅಟ್ಟೂರ, ಶಿವಕುಮಾರ ಪಾರಶೆಟ್ಟಿ, ದಯಾನಂದ ಬಿರಾದಾರ, ಸೋಮನಾಥ ಇಂಡಿ, ರವಿಕುಮಾರ ಶಹಾಪುರಕರ, ಮಹೇಶ ತಲೆಕುಣಿ ಇತರರಿದ್ದರು.