ಮುನವಳ್ಳಿ: ವಿದ್ಯಾರ್ಥಿಗಳಲ್ಲಿರುವ ಶೈಕ್ಷಣಿಕ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಶ್ರಮಿಸುತ್ತಿರುವ ಪಟ್ಟಣದ ಅನ್ನದಾನೇಶ್ವರ ಕಾಲೇಜಿನ ಕಾರ್ಯ ಶ್ಲಾಘನೀಯ ಎಂದು ಕುಂದರಗಿ ಅಡವಿಸಿದ್ದೇಶ್ವರಮಠದ ಅಮರಸಿದ್ದೇಶ್ವರ ಶ್ರೀ ಹೇಳಿದ್ದಾರೆ.
ಪಟ್ಟಣದ ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರ ಸಂಚಾಲಿತ ಅನ್ನದಾನೇಶ್ವರ ಪಿಯು ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಮಾದರಿ ಬದುಕು ಕಟ್ಟಿಕೊಳ್ಳಬೇಕು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಸೋಮಶೇಖರಮಠದ ಮುರುಘೇಂದ್ರ ಶ್ರೀಗಳು ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಹೊಂದಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರ ಸೇವೆ ಮುಂದುವರಿಯಲಿ ಎಂದು ಆಶಿಸಿದರು.
ಸಂಸ್ಥೆಯ ಅಧ್ಯಕ್ಷ ಮುರುಘೇಂದ್ರ ಶ್ರೀ ಮಾತನಾಡಿ, ವಿದ್ಯಾರ್ಥಿಗಳು ಸಮಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿಕ್ಷಕ ಸುಧೀರ ಪತ್ತಾರ, ರುದ್ರಪ್ಪ ನಿಲುಗಲ್ಲ, ದಾನಯ್ಯ ಹಿರೇಮಠ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಅರುಣಗೌಡ ಪಾಟೀಲ, ಗಂಗಾಧರ ಗೊರಾಬಾಳ, ಈರಣ್ಣ ಸಂಕಣ್ಣವರ, ಶಂಕರ ಗಯ್ಯಳಿ, ಮಲ್ಲಿಕಾರ್ಜುನ ಜಮಖಂಡಿ, ಸಂಜು ಕಾಮಣ್ಣವರ, ಪ್ರಾಚಾರ್ಯ ಕೆ.ಬಿ.ನಲವಡೆ, ಎಂ.ಗಿರೀಶ, ಎಂ.ಸಿ.ಬಾಂಡೇಕರ, ಶೇಖರ ಮುಪ್ಪಿನವರಮಠ, ಜಿ.ಜಿ. ಲಮಾಣಿ, ಎನ್.ಎಸ್.ಕಬ್ಬೂರ, ರವಿ ಪೂಜಾರ, ದಾನಯ್ಯ ಗದಗಿನ, ಸಿ.ಬಿ.ಕಾರಬಾರಿ, ಪ್ರಾಚಾರ್ಯ ಎಂ.ಎಚ್.ಪಾಟೀಲ, ಐ.ಕೆ.ಹಿರೇಮಠ, ಗಾಯಿತ್ರಿ ಹಿರೇಮಠ ಇದ್ದರು.