ಹುಲಸೂರಿನಲ್ಲಿ ಶನಿವಾರ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವ ಹಾಗೂ ಲಿಂ.ಬಸವಕುಮಾರ ಶಿವಯೋಗಿಗಳ ೪೯ನೇ ಪುಣ್ಯಸ್ಮರಣೋತ್ಸವದ ಸಮಾರೋಪ ಸಮಾರಂಭವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಬಿಹಾರದ ಸುಧಾ ವರ್ಗೀಸ್ ಉದ್ಘಾಟಿಸಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸಚಿವ ಈಶ್ವರ ಖಂಡ್ರೆ, ಶ್ರೀ ಗುರುನಂಜೇಶ್ವರ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಬಸವಕುಮಾರ ಪಾಟೀಲ್, ಈಶ್ವರಸಿಂಗ್ ಠಾಕೂರ್, ಮಲ್ಲಿಕಾರ್ಜುನ ಗುಂಗೆ, ರೋಷಣಿ ಮಾಳಗೆ, ವಿಷ್ಣುಕಾಂತ ಇತರರಿದ್ದರು. 
ಜಿಲ್ಲೆ

ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ

ಹುಲಸೂರು: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಸಮಾಜ ಸೇವಕಿ ಬಿಹಾರದ ಸುಧಾ ವರ್ಗೀಸ್ ಹೇಳಿದರು.

ಪಟ್ಟಣದ ಗುರುಬಸವೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವ ಹಾಗೂ ಲಿಂ.ಬಸವಕುಮಾರ ಶಿವಯೋಗಿಗಳ ೪೯ನೇ ಪುಣ್ಯಸ್ಮರಣೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮತ್ತು ಶ್ರೀಮಠದಿಂದ ಬಸವ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಾಧನೆ ಮಾಡಬೇಕಾದರೆ ಸಾಕಷ್ಟು ಸಮಸ್ಯೆ ಬರುತ್ತವೆ. ಅವುಗಳನ್ನು ಸವಾಲಾಗಿ ಸ್ವೀಕರಿದರೆ ಮಾತ್ರ ಮುಂದುವರೆಯಲು ಸಾಧ್ಯ. ಪಾಲಕರು ತಮ್ಮ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸದೆ ಕಡ್ಡಾಯ ಶಿಕ್ಷಣ ಕೊಡಿಸಿಅವರನ್ನು ಭಾರತದ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಆಧುನಿಕತೆ ಎಲ್ಲರ ನಿದ್ರೆಗೆಡಿಸಿ ಹೇಗಾದರೂ ಮಾಡಿ ದುಡ್ಡು ಸಂಪಾದನೆ ಮಾಡಬೇಕೆಂಬ ವಿಚಾರ ಹೆಚ್ಚಾಗುತ್ತಿದ್ದರಿಂದ ಜನರು ಅನ್ಯ ಮಾರ್ಗ ಹಿಡಿಯುತ್ತಿರುವುದು ಎಂದು ವಿಷಾದ ಸಂಗತಿ. ೧೨ನೇ ಶತಮಾನದ ಶರಣರ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಗುರುನಂಜೇಶ್ವರ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಬಸವಕುಮಾರ ಪಾಟೀಲ್, ಈಶ್ವರಸಿಂಗ್ ಠಾಕೂರ್, ಮಲ್ಲಿಕಾರ್ಜುನ ಗುಂಗೆ, ರೋಷಣಿ ಮಾಳಗೆ, ವಿಷ್ಣುಕಾಂತ ಮಾತನಾಡಿದರು. ಪ್ರಮುಖರಾದ ಬಾಬು ಹೊನ್ನಾಯಕ, ಲತಾ ಹಾರಕೂಡೆ, ಹಣಮಂತ ಚವ್ಹಾಣ್ ಇತರರಿದ್ದರು. ವೈಜಿನಾಥ ಸಜ್ಜನಶೆಟ್ಟಿ ಸ್ವಾಗತಿಸಿ, ನಿರೂಪಣೆ ಮಾಡಿದರು.

ಬಸವ ಶ್ರೀ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಬಿಹಾರದ ಸುಧಾ ವರ್ಗೀಸ್ ಅವರಿಗೆ ಶ್ರೀಮಠದ ವತಿಯಿಂದ ಬಸವ ಶ್ರೀ ಪ್ರಶಸ್ತಿ ಹಾಗೂ ೫೧ ಸಾವಿರ ರೂ. ನಗದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.