ಜಿಲ್ಲೆ

ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ

ವಿದ್ಯಾ ಶೆಟ್ಟನಗೌಡ್ರ

ಗುಂಡೇವಾಡಿ: ಶಿಷ್ಯ ಎಷ್ಟೇ ಉನ್ನತ ಸ್ಥಾನ ಪಡೆದರೂ ಗುರುವೇ ದೇವರು ಎಂದು ಸಂಬೋಽಸಿ ಅವರ ಆಶೀರ್ವಾದ ಪಡೆದುಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಕೌಲಗುಡ್ಡ-ಹಣಮಾಪುರ ಶ್ರೀಮಠದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.

ಗ್ರಾಮದ ಕಾಡ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಳೇ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣ ಸೇವೆ ನಿಸ್ವಾರ್ಥ ಸೇವೆ ಎಂದರು. ಡಾ. ಪವಾಡೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ವೈದ್ಯ ಆನಂದ ಗುಂಜಿಗಾವಿ ಮಾತನಾಡಿದರು.

ಆರ್.ಎಸ್.ವೀರ, ಎಸ್.ಬಿ.ಗುಂಜಿಗಾಂವಿ, ಜಿ.ಆರ್.ಅವಟಿ, ಪಿ.ಎಚ್.ಬಣಜವಾಡ, ಎಸ್.ಬಿ.ಮಗದುಮ್, ವಿ.ಎಂ.ಬಿರಾದಾರ, ಎ.ಆರ್.ಭೋಸಗೆ, ವಿ.ಎಂ.ಮಮದಾಪೂರ, ಎಂ.ಎಸ್.ಮನಗೂಳಿ, ಎ.ಬಿ.ಮಗದುಮ್, ಬಿ.ಎಸ್.ಶಿಂಗೆ, ಕಸ್ತೂರಿ ಕಾರಜನಗಿ, ಎಸ್.ಎಸ್.ಡೂಗನವರ, ಎಸ್.ಎನ್.ಸಂಕಪಾಳ, ಎ.ಬಿ.ಪಾಟೀಲ್, ಎಲ್.ಬಿ.ಮಾಳಿ, ಡಿ.ಮೋಹಿತೆ ಅವರನ್ನು ಸನ್ಮಾನಿಸಲಾಯಿತು.

ರವಿ ಕಾಂಬಳೆ.ಶಿವಪುತ್ರ ಗುಂಜಿಗಾಂವಿ, ಶಿವಾನಂದ ಗೊಲಭಾವಿ, ಸದಾಶಿವ ಹೊನಗೊಂಡ, ಸಿದಗೌಡ ಪಾಟೀಲ, ಮುತ್ತು ಬಿಳ್ಳೂರ, ಅರ್ಜುನ ಕುಳ್ಳೊಳ್ಳಿ, ಗುರಶಾಂತ ಗೆಜ್ಜಿ, ಬಾಳಕೃಷ್ಣ ಚೌಹಾನ, ಬಾಬು ಗುರವ, ವಿಶ್ವನಾಥ ಕವಟೆಕರ, ಅಶೋಕ ಕವಲಗುಡ್ಡ, ಗೂಳಪ್ಪ ಜತ್ತಿ ಇತರರಿದ್ದರು.