ಜಿಲ್ಲೆ

ಶಿಕ್ಷಣದಲ್ಲಿ ಮಹಿಳಾ ಸಬಲೀಕರಣ : ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದ ಹೆಗ್ಗಳಿಕೆ

ಮೈಸೂರು : ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯ, ಮೈಸೂರು. ಮಹಿಳಾ ಶಿಕ್ಷಣ ಮತ್ತು ಸಬಲೀಕರಣ ಕ್ಷೇತ್ರದಲ್ಲಿ ತನ್ನದೆಯಾದ ಸೇವೆ ನೀಡುತ್ತ ಬರುತ್ತಿದೆ.


ಸಮಾನ ಮತ್ತು ಕೈಗೆಟುಕುವ ಶಿಕ್ಷಣಕ್ಕೆ ಪ್ರವೇಶ ಒದಗಿಸುವುದು. ಬೆಂಬಲ ಪರಿಸರದ ಮೂಲಕ ವಿದ್ಯಾರ್ಥಿ ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳುವುದು. ಪರಿಣಾಮಕಾರಿ ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನವನ್ನು ನೀಡುವುದು. ನಿರಂತರವಾಗಿ ಬದಲಾಗುತ್ತಿರುವ ಸಮಾಜದ ಅಗತ್ಯತೆಗಳು ಮತ್ತು ಬೇಡಿಕೆಗಳಿಗೆ ಸ್ಪಂದಿಸಲು ಸಜ್ಜುಗೊಳಿಸುವುದು. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ತುಂಬುವುದು, ವೈಜ್ಞಾನಿಕ ಮನೋಭಾವ ಮತ್ತು ದೃಷ್ಟಿಕೋನವನ್ನು ಪೋಷಿಸುವುದು. ಸಮಗ್ರ ವಿಧಾನದ ಮೂಲಕ ಜಡ ವಿಭವಗಳನ್ನು ಹೊರತೆಗೆಯುವುದು. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು. ಸಮಗ್ರ ಪ್ರತಿಕ್ರಿಯೆಯ ಮೂಲಕ ನಿರಂತರ ಬಲಪಡಿಸುವಿಕೆಯ ಮೇಲೆ ಕೇಂದ್ರೀಕರಿಸುವುದು. ವೃತ್ತಿ ಅವಕಾಶಗಳನ್ನು ಹೆಚ್ಚಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.


ಸಂಸ್ಥೆಯಲ್ಲಿ ಬಿ.ಕಾಂ, ಬಿಸಿಎ, ಬಿಬಿಎ, ಬಿಎಸ್ಸಿ ಕೋರ್ಸ್‌ಗಳಿದ್ದು, ಉತ್ತಮ ಬೋಧಕ ವರ್ಗವಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದಯ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಲಾಗುತ್ತಿದೆ. ಕಾಲೇಜಿನಲ್ಲಿ ಕಲಿಕೆಗೆ ಉತ್ತಮ ವಾತಾವರಣವಿದ್ದು, ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.


ವಿದ್ಯಾರ್ಥಿಗಳಲ್ಲಿ ವೃತ್ತಿ ಕೌಶಲ ಪ್ರಜ್ಞೆ ಕಲಿಸಲಿದ್ದು, ಬೋಧನೆಗಷ್ಟೆ ಸೀಮಿತವಾಗದೆ, ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲೂ ಸಂಸ್ಥೆ ಮುಂಚೂಣಿಯಲ್ಲಿದ್ದೆ. ಅದರಂತೆ ಪ್ರತಿವರ್ಷ ಕ್ಯಾಂಪಸ್ ಸೆಲೆಕ್ಷನ್ ನಡೆಯಲಿದೆ. ಹತ್ತಾರು ವಿವಿಧ ಕಂಪನಿಗಳು ಪಾಲ್ಗೊಳ್ಳಲಿದ್ದು, ನೂರಾರು ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ ಎನ್ನುತ್ತಾರೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ನಮೃತಾ, ಸಂಧ್ಯಾ, ರಾಜರಾಜೇಶ್ವರಿ, ವಿದ್ಯಾ.