ಕೊಳ್ಳೇಗಾಲ: ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ನಾರಾಯಣ ಗುರುಗಳ 171ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ತಾಲೂಕು ಶಿಕ್ಷಣ ಸಂಯೋಜಕ ಜೆ.ಬಸವರಾಜು ಮಾತನಾಡಿ, ನಾರಾಯಣ ಗುರು ಅವರು ಸಮಾಜದ ಮಧ್ಯೆ ಸಮಾನತೆ, ಬಾಂಧವ್ಯ ಮತ್ತು ಶಿಕ್ಷಣದ ಬೆಳಕನ್ನು ಹರಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಜಾತಿ-ಬೇಧ ಭಾವವಿಲ್ಲದೆ ಎಲ್ಲರಿಗೂ ಮಾನವೀಯ ಮೌಲ್ಯಗಳನ್ನು ಸಾರಿದ ಸಂತರಾಗಿದ್ದಾರೆ. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ತಹಸೀಲ್ದಾರ್ ಬಸವರಾಜು, ಆರ್ಯ ಈಡಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ರವಿನಂದನ್, ಮುಖಂಡರಾದ ಡಿ.ನಟರಾಜುಗೌಡ, ಎಂ.ವಿ.ಶ್ರೀನಿವಾಸ್, ಬಿ.ವೆಂಕಟಪ್ಪ, ಕಿರಣ್ ಕುಮಾರ್, ಲಿಂಗರಾಜು, ಯೋಗೇಶ್, ಯಶವಂತ್ ಕುಮಾರ್, ವರದರಾಜು ಇದ್ದರು.