ಜಿಲ್ಲೆ

ಶಿಕ್ಷಣದ ಜತೆ ಜತೆಗೆ ನೀತಿ ಪಾಠ ಹೇಳಿಕೊಡುವುದು ಅಗತ್ಯ ; ಬಾಳ್ಳುಗೋಪಾಲ್

ಹಾಸನ : ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಯಲ್ಲಿ ನೀತಿ ಪಾಠದ ಮೂಲಕ ವಿನಯತೆ ತಿಳಿಸಿಕೊಡುವುದು ಕೂಡ ಅಗತ್ಯವಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ಹೇಳಿದರು.

ನಗರದ ಅರಳಿಕಟ್ಟೆ ವೃತ್ತದ ಬಳಿ ಇರುವ ಸಂಸ್ಕೃತಿ ಭವನದಲ್ಲಿ ಭಾನುವಾರ ವಂದೇ ಮಾತರಂ ಗೆಳೆಯರ ಬಳಗದಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಷ ಪೂರ್ತಿ ಅಂಕಗಳಿಗೊಸ್ಕರ ಓದುವಿನಲ್ಲೆ ಕಳೆಯುವ ಮಕ್ಕಳನ್ನು ಶಾಲೆ ಮುಗಿದು ಮತ್ತೆ ಮುಂದಿನ ತರಗತಿಗೆ ಹೋಗುವ ಕೆಲ ದಿನಗಳಲ್ಲಿ ಸಿಗುವ ಬಿಡುವಿನ ಸಮಯದಲ್ಲಿ ಇಂತಹ ಉತ್ತಮ ಶಿಬಿರವನ್ನು ಆಯೋಜಿಸಿ ಮಕ್ಕಳನ್ನು ಪಠ್ಯದ ಜೊತೆಯಲ್ಲಿ ಒಳ್ಳೆಯ ಸಂಸ್ಕೃತಿಯನ್ನು ಕಲಿಸುತ್ತಿರುವುದು ಸಮಾಜದಲ್ಲಿ ಒಳ್ಳೆಯ ವಾತವರಣ ನಿರ್ಮಿಸಲು ಸಹಕಾರಿಯಾಗಲಿದೆ ಎಂದರು.

ನಾವು ಮನೆಯಲ್ಲಿ ಮಕ್ಕಳಿಗೆ ಅಂಕ ಹೆಚ್ಚುಗಳಿಸಲು ಓದಲು ಮಾತ್ರ ಹೇಳುತ್ತೇವೆ. ಓದುವ ಜೊತೆಗೆ ನೀತಿ ಪಾಠವನ್ನು ಹೇಳಿಕೊಡುತ್ತಿಲ್ಲ ಎಂಬುವುದು ಬೇಸರದ ಸಂಗತಿ. ನಮ್ಮ ಭಾರತೀಯ ಸಂಸ್ಕೃತಿ ಏನು? ಹಿರಿಯರನ್ನು ಹೇಗೆ ಗೌರವಿಸಬೇಕು? ನಮ್ಮ ಜವಬ್ಧಾರಿ ಏನು? ಎಂಬುದರ ಬಗ್ಗೆ ನಾವುಗಳು ಕಲಿಸಿಕೊಡುತ್ತಿಲ್ಲ. ರಜೆ ಬಂದರೇ ಸಾಕು ಯಾವ ಕಡ ಪ್ರವಾಸ ಮಾಡಬೇಕು? ಎಲ್ಲಿಗೆ ಹೋಗಬೇಕು ಹಾಗೂ ಮೊಬೈಲ್, ಟಿವಿ ಇಂತಹದರಲ್ಲೆ ಕಾಲಕಳೆಯುವ ಮಕ್ಕಳಿಗೆ ಈ ವಂದೆ ಮಾತರಂ ತಂಡ ಮಕ್ಕಳಿಗೆ ಉಪಯುಕ್ತವಾದ ಶಿಬಿರ ಏರ್ಪಡಿಸಿರುವುದು ಶ್ಲಾಘನೀಯ ಎಂದು ಮೆಚ್ಚಗೆ ವ್ಯಕ್ತಪಡಿಸಿದರು.

ಶಿಬಿರದಲ್ಲಿ ಭಾಗವಹಿಸಿದವರಿಗೆ ಇದೆ ವೇಳೆ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ನಾಟ್ಯ ಕಲಾ ನಿವಾಸ್ ಪ್ರಾಂಶುಪಾಲ ವಿದ್ವಾನ್ ಉನ್ನತ್ ಜೈನ್, ವಂದೇಮಾತರಂ ಗೆಳೆಯರ ಬಳಗದ ಮುಖ್ಯ ಸಂಚಾಲಕ ಪ್ರಣವ ಭಾರಧ್ವಾಜ್ ಸೇರಿದಂತೆ ಇತರರು ಹಾಜರಿದ್ದರು.