ಬಸವಕಲ್ಯಾಣ: ವಿದ್ಯಾರ್ಥಿಗಳು ಸಮಯ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶ್ರಮ ವಹಿಸಿ ಅಭ್ಯಾಸ ಮಾಡಬೇಕು. ಶಿಕ್ಷಣದ ಜತೆಗೆ ಆದರ್ಶ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಗುರುಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ನುಡಿದರು.
ನಗರದ ಶ್ರೀ ಜಗದ್ಗುರು ಬಸವಕುಮಾರೇಶ್ವರ ಪ್ರೌಢ (ಜೆಬಿಕೆ)ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ೫೫ನೇ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ವಿದ್ಯಾರ್ಥಿಗಳು ತಂದೆ-ತಾಯಿಗೆ, ಗುರು ಹಿರಿಯರಿಗೆ ಗೌರವ ನೀಡಬೇಕು ಎಂದರು.
ಶಿಕ್ಷಕ ಪ್ರಕಾಶ ಜಾಧವ್ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಮುಖ್ಯವಾದ್ದು, ಶ್ರಮ ವಹಿಸಿ ಅಭ್ಯಾಸ ಮಾಡುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಮುಖ್ಯಗುರು ಶಿವಶಂಕರ ಪಾರಶೆಟ್ಟೆ, ಶಿವಾನಂದೇಶ್ವರ ಶಾಲೆಯ ಮುಖ್ಯಗುರು ನಾಗರಾಜ ಶೀಲವಂತ, ಸಂಗಮೇಶ ಭುರೆ, ಶಿವುಕುಮಾರ ಪಾಟೀಲ್, ಪೂಜಾ ಶೀಲವಂತ, ಅಖಿಲೇಶ ಬಿರಾದಾರ ಇತರರಿದ್ದರು.
ದೈಹಿಕ ಶಿಕ್ಷಕ ಹೀರಾಸಿಂಗ್ ಭೋವಿ ಸ್ವಾಗತಿಸಿ, ನಿರೂಪಣೆ ಮಾಡಿದರು. ಶಾಮು ಚವ್ಹಾಣ್ ವಂದಿಸಿದರು. ಶೃಷ್ಠಿ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ, ಕೀರ್ತಿ ಮತ್ತು ಪೂಜಾ ಸ್ವಾಗತ ಗೀತೆ ಹಾಡಿದರು. ವಿದ್ಯಾರ್ಥಿಗಳಾದ ದತ್ತಾ ಮೆಹತ್ರೆ, ಸೃಷ್ಠಿ ಹಾಗೂ ದಾನೇಶ್ವರಿ ಅನಿಸಿಕೆ ವ್ಯಕ್ತಪಡಿಸಿದರು.