ಜಿಲ್ಲೆ

ಶಿಕ್ಷಣದ ಘನತೆ ಎತ್ತಿ ಹಿಡಿದ ಸಾವಿತ್ರಿಬಾಯಿ ಫುಲೆ

ತೆಲಸಂಗ: ಶಿಕ್ಷಣ ಪ್ರತಿಯೊಬ್ಬರ ಅವಕಾಶದ ಬಾಗಿಲು ತೆರೆಯುವ ಕೀಲಿಯಾಗಿದ್ದು, ಸಾವಿತ್ರಿಬಾಯಿ ಫುಲೆ ಜೀವನದ ಕುರಿತು ತಿಳಿಸುವ ಕೆಲಸವಾಗಬೇಕಿದೆ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.

ಗ್ರಾಮದ ಮಾಳಿ ಸಮುದಾಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣದ ಘನತೆ ಎತ್ತಿ ಹಿಡಿದ ಸಾವಿತ್ರಿಬಾಯಿ ಫುಲೆಯವರ ಮಹತ್ವದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಬೇಕಿದೆ ಎಂದರು.

ಉಪನ್ಯಾಸಕಿ ರೋಹಿಣಿ ಜತ್ತಿ ಉಪನ್ಯಾಸ ನೀಡಿ, ಸಾವಿತ್ರಿಬಾಯಿ ಫುಲೆ ಸಮಾಜ ಸುಧಾರಕಿಯಾಗಿ ತಲೆಮಾರುಗಳಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಪ್ರವರ್ತಕ ಕೆಲಸವು ಭಾರತದಲ್ಲಿ ಹೆಚ್ಚು ಸಮಾನ ಮತ್ತು ವಿದ್ಯಾವಂತ ಸಮಾಜಕ್ಕೆ ಅಡಿಪಾಯ ಹಾಕಿದೆ. ಮಹಿಳೆಯರು, ಶೋಷಿತರು, ದಲಿತರಿಗೆ ಶಿಕ್ಷಣ ನೀಡಿ, ಸಾಂಪ್ರದಾಯಿಕ ಕಟ್ಟುಪಾಡು ಮೀರಿ, ಲೋಕಕ್ಕೆ ಶಿಕ್ಷಣದ ಅವಶ್ಯವಿದೆ ಎಂದು ಅಸಂಖ್ಯಾತ ಜನರಿಗೆ ಅಕ್ಷರ ಜ್ಞಾನ ನೀಡಿದ ಧೀರ ಮಹಿಳೆ ಎಂದು ಶ್ಲಾಸಿದರು.

ವಿವೇಕಾನಂದ ಹಳಿಂಗಳಿ ಮಹಾರಾಜರು, ಗ್ರಾಪಂ ಅಧ್ಯಕ್ಷೆ ಭಾರತಿ ಲೋಕಂಡೆ, ಉಪಾಧ್ಯಕ್ಷೆ ಅನಿತಾ ಕಂದಾರೆ ಇತರರಿದ್ದರು.