ನಾಗೇನಹಳ್ಳಿಯಲ್ಲಿ ಏರ್ಪಡಿಸಿದ್ದ ನುಡಿ ನಿತ್ಯೋತ್ಸವ ಕಾರ್ಯಕ್ರಮವನ್ನು ಸಾಹಿತಿ ಚಟ್ನಳ್ಳಿ ಮಹೇಶ್ ಉದ್ಘಾಟಿಸಿದರು. ವಿರೂಪಾಕ್ಷಪ್ಪ, ಹೊಸೂರು ಪುಟ್ಟರಾಜು, ಎಂ.ಆರ್.ಪ್ರಕಾಶ್, ಎಚ್.ತಿಮ್ಮಯ್ಯ ಇತರರಿದ್ದರು. 
ಜಿಲ್ಲೆ

ಶಿಕ್ಷಣಕ್ಕಿಂತ ವಿವೇಕ ಮುಖ್ಯ

ತರೀಕೆರೆ: ಶಿಕ್ಷಣಕ್ಕಿಂತ ವಿವೇಕ ಮುಖ್ಯ. ಮನೆಯಲ್ಲಿ ಸಂಸ್ಕಾರ ಪ್ರಾರಂಭವಾಗಿ ಅದು ಎಲ್ಲೆಡೆ ಪಸರಿಸಿದಾಗ ನಾಡು ಸುಭಿಕ್ಷವಾಗಲಿದೆ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ನಾಗೇನಹಳ್ಳಿಯಲ್ಲಿ ತಾಲೂಕು ಸಿರಿಗನ್ನಡ ವೇದಿಕೆಯಿಂದ ಏರ್ಪಡಿಸಿದ್ದ ನುಡಿ ನಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,

ಪಾಲಕರು ಮಕ್ಕಳಲ್ಲಿ ಭಾಷಾಭಿಮಾನ ತುಂಬಿದಾಗ ಕನ್ನಡಕ್ಕೆ ಆಪತ್ತು ಎದುರಾಗದು ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ, ವಚನ ಸಾಹಿತ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆಯಲ್ಲದೆ ಮಾನವನ ಬದುಕಿಗೆ ಉತ್ತಮ ಸಂದೇಶ ನೀಡಿದೆ ಎಂದು ಹೇಳಿದರು.

ಸಾಹಿತಿ ಹೊಸೂರು ಪುಟ್ಟರಾಜು ಮಾತನಾಡಿ, ವಚನ ಸಾಹಿತ್ಯ ಅರಿವು ಮತ್ತು ಜ್ಞಾನದ ಸಂಕೇತ. ಅನುಭಾವಿಗಳ ವಚನ ಮಂಟಪ ಜಗತ್ತಿಗೆ ಮಾದರಿ. ಅಲ್ಲಿ ಸತ್ಯನಿಷ್ಠೆ, ಪ್ರಾಮಾಣಿಕತೆ ಮನೆ ಮಾಡಿತ್ತು ಎಂದರು.

ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪ್ರಕಾಶ್ ಮಾತನಾಡಿ, ಜಿಲ್ಲಾದ್ಯಂತ ವರ್ಷಪೂರ್ತಿ ನಾಡು ನುಡಿ ಮತ್ತು ಸಂಸ್ಕೃತಿ ಅನಾವರಣಗೊಳಿಸುವ ಕಾರ್ಯಕ್ರಮ ವೇದಿಕೆ ಆಯೋಜಿಸುತ್ತ ಬರುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಕಲಾವಿದರು, ಸಾಹಿತಿಗಳ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ನಾಗೇನಹಳ್ಳಿ ಎಚ್.ತಿಮ್ಮಯ್ಯ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜಪ್ಪ, ಕದಳಿ ವೇದಿಕೆ ಅಧ್ಯಕ್ಷೆ ಮಮತಾ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜನ, ಪ್ರಕಾಶ್, ಜನಪದ ಕಲಾವಿದ ಶಂಕರಪ್ಪ, ಪ್ರಮುಖರಾದ ಗಣೇಶ್, ಟಿ.ಸಿ.ಶಿವಕುಮಾರ ಸ್ವಾಮಿ, ಸದಾಶಿವಪ್ಪ ಇತರರಿದ್ದರು.